LBA 8th KANNADA (SL) ಪಾಠ -೮. ಎಮ್ಮ ಮನೆಯಂಗಳದಿ…

ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ
ತರಗತಿ -೮ • ವಿಷಯ – ಕನ್ನಡ (SL)

MODEL QUESTION BANK OF LESSON BASED ASSESSMENT

Lesson Based Assessment 

Class – 8

Sub. – Kannada (Second Language)

ಪಾಠ – ೮. ಎಮ್ಮ ಮನೆಯಂಗಳದಿ…

        2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸುವ ಸಂಬಂಧ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸಾಧಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಲಾಗಿದೆ. ಸದರಿ ಸಾಮಗ್ರಿಯನ್ನು ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸುವುದು ಅತ್ಯವಶ್ಯಕವಾಗಿದೆ.

1. ಪಾಠ ಆಧಾರಿತ ಮೌಲ್ಯಾಂಕನದ (LBA) ಉದ್ದೇಶಗಳು:

    ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಿಕೊಳ್ಳುವುದು.

    ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವುದು.

    ಮಕ್ಕಳ ಪ್ರಗತಿಯನ್ನು ಗುರುತಿಸುವಲ್ಲಿ ಪರೀಕ್ಷಾ ಅವಲಂಬನೆಯನ್ನು ಕಡಿಮೆ ಮಾಡಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.

    ನಿರಂತರ ವಿಶ್ಲೇಷಣೆಯಿಂದ ನಿಗದಿತ ಕಲಿಕಾ ಫಲಗಳ ಗಳಿಕೆಗೆ ಅವಕಾಶ ನೀಡುವುದು.

    ವಿವಿಧ ಕಲಿಕಾ ಹಂತದ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ Inclusive Assessment ಗೆ ಪ್ರೇರಣೆ ನೀಡುವುದು.

    ಶಿಕ್ಷಕರ ಮೌಲ್ಯಮಾಪನ ಸಾಮರ್ಥ್ಯವನ್ನು ಹೆಚ್ಚಿಸುವುದು. (ಮೌಖಿಕ, ಪ್ರಾಯೋಗಿಕ, ಸಹವರ್ತಿ ಮೌಲ್ಯಮಾಪನ ಯೋಜನೆಗಳು, Portfolio, ಸ್ವ-ಮೌಲ್ಯಮಾಪನ ಇತ್ಯಾದಿ…)

    ವಿದ್ಯಾರ್ಥಿಗಳ ಕಲಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು.

ಪ್ರತಿ ಹಂತದ ವಿದ್ಯಾರ್ಥಿಯ ಕಲಿಕೆಯನ್ನು ಪೋಷಕರ ಗಮನಕ್ಕೆ ತರುವುದು.

    ಪಾಠ ಆಧಾರಿತ ಮೌಲ್ಯಾಂಕನ ಚೌಕಟ್ಟು, ಸಾಂಪ್ರದಾಯಿಕ ಪರೀಕ್ಷಾ ಕೇಂದ್ರಿತ ಮೌಲ್ಯಮಾಪನದಿಂದ ದೈನಂದಿನ ತರಗತಿ ಕಲಿಕಾ ಪ್ರಕ್ರಿಯೆಯೊಂದಿಗೆ ಸಂಯೋಜಿತವಾದ    ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ (CCE) ಪೂರಕವಾಗಿಸುವುದು.

ಪಾಠ ಆಧಾರಿತ ಮಾದರಿ ಪ್ರಶ್ನಕೋಠಿ

ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ (ತರಗತಿ -೮)
ವಿಷಯ – ಕನ್ನಡ (SL) | ಪಾಠ – ೮. ಎಮ್ಮ ಮನೆಯಂಗಳದಿ…

(ಈ ಪ್ರಶ್ನೆಗಳು ಅಭ್ಯಾಸಕ್ಕಾಗಿ ಮಾತ್ರ)

ಕಲಿಕಾ ಫಲಿತಾಂಶಗಳು (Learning Outcomes)

  1. ಪಾಠದಲ್ಲಿರುವ ಹೊಸ ಪದಗಳ ಅರ್ಥವನ್ನು ತಿಳಿದು, ಅವುಗಳನ್ನು ತಮ್ಮ ಮಾತು ಮತ್ತು ಬರಹದಲ್ಲಿ ಬಳಸುತ್ತಾರೆ.
  2. ಪ್ರಬಂಧದ ಆಶಯವನ್ನು (ಬಾಲ್ಯದ ನೆನಪುಗಳು ಮತ್ತು ಅಂಗಳದ ಮಹತ್ವ) ಸರಳವಾಗಿ ಹೇಳುತ್ತಾರೆ.
  3. ಲೇಖಕರು ವಿವರಿಸಿರುವ ಅಂಗಳದ ವಿಭಿನ್ನ ಉಪಯೋಗಗಳನ್ನು (ಆಟ, ಹಬ್ಬ, ಕೆಲಸ) ಪಟ್ಟಿ ಮಾಡುತ್ತಾರೆ.
  4. ಪಾಠದಲ್ಲಿರುವ ದ್ವಿರುಕ್ತಿ, ಜೋಡುನುಡಿ ಮತ್ತು ನುಡಿಗಟ್ಟುಗಳನ್ನು ಗುರುತಿಸಿ, ಅವುಗಳ ಅರ್ಥ ಮತ್ತು ಬಳಕೆಯನ್ನು ತಿಳಿಯುತ್ತಾರೆ.
  5. ಬದಲಾಗುತ್ತಿರುವ ಅಂಗಳದ ಹೊಸ ರೂಪ ಮತ್ತು ಹಳೆಯ ನೆನಪುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತಾರೆ.
  6. ಪ್ರಶ್ನೆಗಳಿಗೆ ಸ್ಪಷ್ಟವಾಗಿ ಒಂದು ವಾಕ್ಯದಲ್ಲಿ ಅಥವಾ ಚಿಕ್ಕ ವಾಕ್ಯಗಳಲ್ಲಿ ಉತ್ತರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾರೆ.

I. ಒಂದು ಪದದಲ್ಲಿ ಉತ್ತರಿಸಿ (10)

1. ಮನೆಯೊಳಗು ಮತ್ತು ಹೊರ ಪ್ರಪಂಚದ ನಡುವಿನ ಕೊಂಡಿ ಯಾವುದು?
ಅಂಗಳ
2. ಲೇಖಕರ ಬಾಲ್ಯದ ಆಟಗಳಿಗೆ ‘ಹೆಡ್ ಆಫೀಸ್’ ಆಗಿದ್ದ ಜಾಗ ಯಾವುದು?
ಅಂಗಳ
3. ಬೇಸಗೆಯಲ್ಲಿ ಅಜ್ಜಿಮನೆಯಲ್ಲಿ ಆಡುತ್ತಿದ್ದ ಒಂದು ಆಟದ ಹೆಸರೇನು?
ಕಂಬಾಟ/ಕಣ್ಣಾಮುಚ್ಚಾಲೆ
4. ಮನೆಯೊಳಗೆ ಮೊದಲು ಕತ್ತಲಾಗುವುದಾದರೆ, ಮೊದಲು ಬೆಳಕಾಗುವುದು ಎಲ್ಲಿಗೆ?
ಅಂಗಳಕ್ಕೆ
5. ಹುಟ್ಟಿನ ಸಂಭ್ರಮಕ್ಕೆ ಒಳಮನೆ ಸಾಕ್ಷಿಯಾದರೆ, ಯಾವುದಕ್ಕೆ ಅಂಗಳವೇ ಆಶ್ರಯ?
ಸಾವಿನ ಸೂತಕಕ್ಕೆ
6. ಹಪ್ಪಳ-ಸಂಡಿಗೆಗಳನ್ನು ಸಿದ್ಧಪಡಿಸುವ ಕಾಲ ಯಾವುದು?
ಮೇ ತಿಂಗಳು/ಬೇಸಗೆ
7. ಅಂಗಳದ ನಕ್ಷತ್ರ ಎಂದು ಯಾವುದನ್ನು ಕರೆಯಲಾಗಿದೆ?
ತುಳಸೀಕಟ್ಟೆಯ ಪುಟ್ಟ ದೀಪ
8. ಲೇಖಕರು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಸಾಹಿತ್ಯ ಪ್ರಕಾರ ಯಾವುದು?
ಲಲಿತ ಪ್ರಬಂಧ
9. ಕರಾವಳಿಯಲ್ಲಿ ಮಳೆಗಾಲದಲ್ಲಿ ಅಂಗಳಕ್ಕೆ ಬರುವ ಜನಪದ ನೃತ್ಯ ಯಾವುದು?
ಆಟಿ ಕಳಂಜ
10. ಹೊಸದಾಗಿ ಮದುವೆಯಾದ ತರುಣಿಗೆ ಏನೆಂದು ಕರೆಯುತ್ತಾರೆ?
ನವವಧು

II. ಬಿಟ್ಟ ಸ್ಥಳ ತುಂಬಿರಿ (10)

11. ಮನೆಯೇ ಮೊದಲ ಪಾಠಶಾಲೆ, ಅಂಗಳವೇ ಮೊದಲ _________.
ಮೈದಾನ
12. ಬೇಸಗೆಯ ನನ್ನ ಅಜ್ಜನ ಮನೆಯ ಸಕಲ ಆಟಗಳಿಗೂ ಅಂಗಳವೇ _________.
ಹೆಡ್ಡಾಫೀಸಾಗಿತ್ತು
13. ಬಿಸಿಲಿಗೆ ನಾಯಿ ಕಾಗೆಗಳನ್ನೋಡಿಸುವ ನೆಪದಲ್ಲಿ, ಅಲ್ಲೇ ಕೂತು _________ ತಿನ್ನುವ ರುಚಿಯನ್ನು ವರ್ಣಿಸಲು ಪದಗಳಿಲ್ಲ.
ಹಸಿ ಹಪ್ಪಳ
14. ಹಪ್ಪಳ ಸಂಡಿಗೆಗಳನ್ನು ಮಾಡುವವರ ಪಾಲಿನ ಅಮೋಘ ಮಿತ್ರ _________.
ಅಂಗಳ
15. ಮುತ್ತೈದೆಯ ಹಣೆಗೆ ತಿಲಕ ಇಟ್ಟಂತೆ, ಅಂಗಳಕ್ಕೆ _________.
ತುಳಸೀಕಟ್ಟೆ
16. ಉತ್ಥಾನ ದ್ವಾದಶಿಯ _________ ಮದುವೆಗೆ ಅಂಗಳದ್ದೇ ಪಾರುಪತ್ಯ.
ತುಳಸೀ
17. ಸೆಗಣಿಯ ಅಂಗಳವನ್ನು ಇದೀಗ _________ ನಿಧಾನವಾಗಿ ಬಂಧಿಸುತ್ತಿವೆ.
ಇಂಟರ್‌ಲಾಕುಗಳು
18. ಅಂಗಳದ ಹುಲಿದನದ ಆಟವು ಈಗ _________ಗೆ ವರ್ಗಾವಣೆಯಾಗಿದೆ.
ಮೊಬೈಲ್ ಫೋನಿಗೆ
19. ಮಳೆಗಾಲದಲ್ಲಿ ತುಳಸಿಯ ದೀಪಕ್ಕೆ _________ ಆಸರೆ.
ಹೊಸ್ತಿಲೇ
20. ದೀಪಾವಳಿಯಂದು ತಿರುಗುವ _________ಗೆ ಸಿಮೆಂಟಿನಂಗಳದಲ್ಲಿ ಹೊಸ ವೇಗ ದಕ್ಕಿದೆ.
ನೆಲಚಕ್ರಕ್ಕೆ

III. ಸರಿ ಉತ್ತರವನ್ನು ಆರಿಸಿ ಬರೆಯಿರಿ (10)

21. ‘ಆಡುಂಬೊಲ’ ಪದದ ಅರ್ಥ:
b) ಆಟದ ಬಯಲು
22. ಅಂಗಳದಲ್ಲಿ ‘ಸೆಗಣಿ ಸಾರಿಸುವ’ ಕೆಲಸದಲ್ಲಿ ಯಾವುದನ್ನು ಪುಡಿ ಮಾಡಿ ತುಂಬುತ್ತಿದ್ದರು?
b) ಹಳೆಯ ಬ್ಯಾಟರಿ ಸೆಲ್ಲು
23. ಹಲಸಿನ ಹಣ್ಣಿನ ಒಂದು ಎಸಳಿಗೆ ಏನೆಂದು ಕರೆಯುತ್ತಾರೆ?
c) ಸೊಳೆ
24. ಮಳೆಗಾಲದಲ್ಲಿ ಅಂಗಳದಲ್ಲಿ ಅಚ್ಚರಿಯಿಂದ ಮೂಡುವ ಒಂದು ಗಿಡ:
b) ಟೊಮೇಟೊ ಗಿಡ
25. ‘ಜಿಹ್ವಾಚಾಪಲ್ಯ’ ಪದದ ಅರ್ಥ:
b) ನಾಲಗೆಯ ಚಪಲ, ತಿಂಡಿಪೋತತನ
26. ‘ಪಾರುಪತ್ಯ’ ಪದದ ಅರ್ಥ:
a) ಮುಖ್ಯ ಆಡಳಿತ, ಜವಾಬ್ದಾರಿ
27. ಮಲೆನಾಡಿನಲ್ಲಿ ಅಡಿಕೆ ಮರವನ್ನು ಸೀಳಿ ಏನನ್ನು ಮಾಡುತ್ತಾರೆ?
b) ಟೆಂಪರರಿ ಕಾಲುಹಾದಿ
28. ಹೊಸದಾಗಿ ಮದುವೆಯಾದ ಹೆಣ್ಣಿಗೆ ಹಳೆಯದು ಎನ್ನಿಸುವ ಜಾಗ ಯಾವುದು?
c) ಆ ಅಂಗಳ
29. ಲಲಿತ ಪ್ರಬಂಧದ ಭಾಷೆ ಹೇಗಿರುತ್ತದೆ?
b) ನವುರಾಗಿರುತ್ತದೆ
30. ‘ಕತ್ತಿಮಸೆ’ ಎಂಬ ನುಡಿಗಟ್ಟಿನ ಅರ್ಥ:
c) ದ್ವೇಷ ಸಾಧಿಸು

IV. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ (10)

31. ಮನೆ ಮತ್ತು ಅಂಗಳಗಳ ನಡುವಿನ ಒಂದು ವ್ಯತ್ಯಾಸವನ್ನು ತಿಳಿಸಿ.
ಮನೆಯೊಳಗು ಕತ್ತಲಾಗುವುದಾದರೆ, ಮೊದಲು ಬೆಳಕಾಗುವುದು ಅಂಗಳಕ್ಕೆ. ಹುಟ್ಟಿನ ಸಂಭ್ರಮಕ್ಕೆ ಒಳಮನೆ ಸಾಕ್ಷಿಯಾದರೆ, ಸಾವಿನ ಸೂತಕಕ್ಕೆ ಅಂಗಳವೇ ಆಶ್ರಯ.
32. ಅಜ್ಜಿ ಬೈದಾಗ ಹುಡುಗರು ಯಾಕೆ ಖುಷಿಯಾಗುತ್ತಿದ್ದರು?
ಅವರು ಅಂಗಳದಲ್ಲಿ ಆಟವಾಡಿದಾಗ ಕಷ್ಟಪಟ್ಟು ಸಾರಿಸಿದ ಸೆಗಣಿ ನೆಲ ಕಿತ್ತು ಹೋಗುತ್ತಿತ್ತು. ಆಗ ಅಜ್ಜಿ ಬೈದರೂ, ಮಾರನೇ ದಿನದ ಸೆಗಣಿ ಸಾರಿಸುವ ಕೆಲಸ ಆಟಗಳಿಗೂ ಮಿಗಿಲಾದ ಮಜಾ ನೀಡುತ್ತಿತ್ತು, ಆದ್ದರಿಂದ ಅವರು ಖುಷಿಯಾಗುತ್ತಿದ್ದರು.
33. ಮಳೆಗಾಲದಲ್ಲಿ ಅಂಗಳದಲ್ಲಿ ಯಾವ ಯಾವ ಗಿಡಗಳು ಮೊಳೆಯುತ್ತವೆ? ಯಾವುದಾದರೂ ಎರಡನ್ನು ಹೆಸರಿಸಿ.
ಮಳೆಗಾಲದಲ್ಲಿ ನಾಗದಾಳಿ ಗಿಡ, ಡೇರೇ ಹೂವಿನ ಗಿಡ, ಗೌರೀ ಹೂಗಳ ಗಿಡ ಮತ್ತು ಟೊಮೇಟೊ ಗಿಡಗಳು ಮೊಳೆಯುತ್ತವೆ.
34. ದ್ವಿರುಕ್ತಿ ಎಂದರೇನು?
ಒಂದೇ ಪದ ಮಾತು ಇಲ್ಲವೇ ಬರವಣಿಗೆಯಲ್ಲಿ ಎರಡು ಸಾರಿ ಬಳಕೆಯಾದರೆ ಅದನ್ನು ‘ದ್ವಿರುಕ್ತಿ’ ಎನ್ನುತ್ತಾರೆ. ಇದು ಉತ್ಸಾಹ, ಅವಸರ, ದುಃಖದಂತಹ ಭಾವನೆಗಳ ತೀವ್ರತೆಯನ್ನು ವ್ಯಕ್ತಪಡಿಸಲು ಬಳಕೆಯಾಗುತ್ತದೆ.
35. ಸಮಾನಾರ್ಥಕ ಜೋಡುನುಡಿಗೆ ಒಂದು ಉದಾಹರಣೆ ನೀಡಿ.
ಸಮಾನಾರ್ಥಕ ಜೋಡುನುಡಿ ಎಂದರೆ, ಸಮಾನವಾದ ಅರ್ಥವಿರುವ ಎರಡು ಪದಗಳನ್ನು ಜೋಡಿಸಿ ಬಳಸುವುದು. ಉದಾಹರಣೆ: ಉಡುಗೆತೊಡುಗೆ, ಅವಳಿಜವಳಿ.
36. ಪಡೆನುಡಿ ಅಥವಾ ನುಡಿಗಟ್ಟು ಎಂದರೇನು?
ವಿಶೇಷಾರ್ಥ ನೀಡುವ ಪದ ಪುಂಜವನ್ನು ‘ಪಡೆನುಡಿ’ ಅಥವಾ ‘ನುಡಿಗಟ್ಟು’ ಎಂದು ಕರೆಯಲಾಗುತ್ತದೆ. ಇಲ್ಲಿ ಪದಗಳ ಬಾಹ್ಯ ಅರ್ಥಕ್ಕಿಂತ ಒಳ ಅರ್ಥ ಪ್ರಧಾನವಾಗಿರುತ್ತದೆ. ಉದಾ: ಕೈಕೊಡು.
37. ಮಲೆನಾಡಿನಲ್ಲಿ ಮದುವೆಯ ತಯಾರಿಗಳಿಗೆ ಅಂಗಳ ಹೇಗೆ ಆಶ್ರಯದಾತ?
ಮಲೆನಾಡಿನಲ್ಲಿ ಬಹಳ ಮದುವೆಗಳ ಮಂಟಪಗಳಿಗೆ ಅಂಗಳವೇ ಆಶ್ರಯದಾತ. ಪಕ್ಕದ ಮನೆ ಅಂಗಳದಲ್ಲಿ ಬಾಳೆ ಎಲೆಗಳನ್ನು ಕ್ಲೀನು ಮಾಡಿ, ತರಕಾರಿ ಕೊಚ್ಚಿದರೆ, ಮತ್ತೊಂದು ಮನೆಯಂಗಳದಲ್ಲಿ ಊಟದ ತಯಾರಿ ನಡೆಯುತ್ತದೆ.
38. ಅಡಿಕೆ ಸುಲಿಯುವ ಸಮಯದಲ್ಲಿ ಅಂಗಳದಲ್ಲಿ ಯಾರ‍್ಯಾರು ಇರುತ್ತಾರೆ?
ಅಡಿಕೆ ಸುಲಿಯುವ ಸಮಯದಲ್ಲಿ ಊರ ಮಂದಿಯೆಲ್ಲ ಒಂದಾಗಿರುತ್ತಾರೆ. ವಿದೇಶೀ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಮನೆಮಗನೂ ಮತ್ತು ಆಳುಮಗನೂ ಕೂಡ ಒಟ್ಟಿಗೇ ಅಡಿಕೆ ಸುಲಿಯುತ್ತಿರುತ್ತಾರೆ.
39. ಈಗಿನ ಅಂಗಳದಲ್ಲಿ ಹೂ ಗಿಡಗಳಿಗೆ ಆಗಿರುವ ಬದಲಾವಣೆ ಏನು?
ಹಿಂದೆ ಸ್ವಚ್ಛಂದವಾಗಿ ಬೇರು ಬಿಟ್ಟಿದ್ದ ಹೂ ಗಿಡಗಳಿಗೆ ಶಿಸ್ತು ಕಲಿಸಲು ಇದೀಗ ಕುಂಡಗಳು (Flower pots) ಬಂದಿವೆ.
40. ಲಲಿತ ಪ್ರಬಂಧದ ಒಂದು ಮುಖ್ಯ ಆಶಯ ತಿಳಿಸಿ.
ಒಂದು ಒಳ್ಳೆಯ ಲಲಿತ ಪ್ರಬಂಧವನ್ನು ಓದಿದಾಗ ಓದುಗನ ಮನಸ್ಸಿಗೆ ಹಿತವಾದ ಅನುಭವವನ್ನು ಕೊಡುವುದು, ಅವನ ಭಾವಕೋಶವನ್ನು ವಿಸ್ತರಿಸುವುದು ಮತ್ತು ಮನಸ್ಸಿಗೆ ಉಲ್ಲಾಸ ಸಂತೋಷಗಳನ್ನು ಕೊಡುವುದು ಇದರ ಆಶಯ.

V. ವಿರುದ್ಧಾರ್ಥಕ ಪದಗಳು ಮತ್ತು ವ್ಯಾಕರಣ (15)

A. ವಿರುದ್ಧಾರ್ಥಕ ಪದಗಳು (Opposites) (8)

41. ಒಳಗೆ $\times$
ಹೊರಗೆ
42. ಬೆಳಕು $\times$
ಕತ್ತಲು
43. ಹುಟ್ಟು $\times$
ಸಾವು
44. ಹೊಸ $\times$
ಹಳೆಯ
45. ಆಳು $\times$
ಅರಸ
46. ದೊಡ್ಡ $\times$
ಪುಟ್ಟ/ಚಿಕ್ಕ
47. ಮಳೆಗಾಲ $\times$
ಬೇಸಗೆ
48. ಸ್ವತಂತ್ರ $\times$
ಪರತಂತ್ರ/ಪರಾವಲಂಬಿ

B. ಮಾದರಿಯಂತೆ ಬಿಡಿಸಿ ಬರೆಯಿರಿ (ಸಂಧಿ ವಿಚ್ಛೇದನೆ) (7)

49. ಕಾಣಬೇಕೆಂದು =
ಕಾಣಬೇಕು + ಎಂದು
50. ಮನೆಯೊಳಕ್ಕಾದರೆ =
ಮನೆ + ಒಳಕ್ಕೆ + ಆದರೆ
51. ಪರಮಾನಂದ =
ಪರಮ + ಆನಂದ
52. ಮಲೆನಾಡಿನಲ್ಲಾದರೆ =
ಮಲೆನಾಡಿನಲಿ + ಆದರೆ
53. ಒಂದಾಟ =
ಒಂದು + ಆಟ
54. ಕೈಕೊಡು ಎಂಬ ನುಡಿಗಟ್ಟಿನ ಅರ್ಥ:
ಮೋಸ ಮಾಡು
55. ಬೆನ್ನುತಟ್ಟು ಎಂಬ ನುಡಿಗಟ್ಟಿನ ಅರ್ಥ:
ಪ್ರೋತ್ಸಾಹಿಸು
Join WhatsApp Channel Join Now
Telegram Group Join Now