LBA 6th KANNADA (SL) ಪಾಠ – ೧೦ ಐಕ್ಯಗಾನ (ಪದ್ಯ)

ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ
ತರಗತಿ -೬ • ವಿಷಯ – ಕನ್ನಡ (SL)

MODEL QUESTION BANK OF LESSON BASED ASSESSMENT

Lesson Based Assessment 

Class – 6

Sub. – Kannada (Second Language)

ಗದ್ಯ – ೧೧ ಸಾಹಸಿ ಮೊನಾಲಿಸಾ

        2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸುವ ಸಂಬಂಧ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸಾಧಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಲಾಗಿದೆ. ಸದರಿ ಸಾಮಗ್ರಿಯನ್ನು ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸುವುದು ಅತ್ಯವಶ್ಯಕವಾಗಿದೆ.

1. ಪಾಠ ಆಧಾರಿತ ಮೌಲ್ಯಾಂಕನದ (LBA) ಉದ್ದೇಶಗಳು:

    ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಿಕೊಳ್ಳುವುದು.

    ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವುದು.

    ಮಕ್ಕಳ ಪ್ರಗತಿಯನ್ನು ಗುರುತಿಸುವಲ್ಲಿ ಪರೀಕ್ಷಾ ಅವಲಂಬನೆಯನ್ನು ಕಡಿಮೆ ಮಾಡಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.

    ನಿರಂತರ ವಿಶ್ಲೇಷಣೆಯಿಂದ ನಿಗದಿತ ಕಲಿಕಾ ಫಲಗಳ ಗಳಿಕೆಗೆ ಅವಕಾಶ ನೀಡುವುದು.

    ವಿವಿಧ ಕಲಿಕಾ ಹಂತದ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ Inclusive Assessment ಗೆ ಪ್ರೇರಣೆ ನೀಡುವುದು.

    ಶಿಕ್ಷಕರ ಮೌಲ್ಯಮಾಪನ ಸಾಮರ್ಥ್ಯವನ್ನು ಹೆಚ್ಚಿಸುವುದು. (ಮೌಖಿಕ, ಪ್ರಾಯೋಗಿಕ, ಸಹವರ್ತಿ ಮೌಲ್ಯಮಾಪನ ಯೋಜನೆಗಳು, Portfolio, ಸ್ವ-ಮೌಲ್ಯಮಾಪನ ಇತ್ಯಾದಿ…)

    ವಿದ್ಯಾರ್ಥಿಗಳ ಕಲಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು.

ಪ್ರತಿ ಹಂತದ ವಿದ್ಯಾರ್ಥಿಯ ಕಲಿಕೆಯನ್ನು ಪೋಷಕರ ಗಮನಕ್ಕೆ ತರುವುದು.

    ಪಾಠ ಆಧಾರಿತ ಮೌಲ್ಯಾಂಕನ ಚೌಕಟ್ಟು, ಸಾಂಪ್ರದಾಯಿಕ ಪರೀಕ್ಷಾ ಕೇಂದ್ರಿತ ಮೌಲ್ಯಮಾಪನದಿಂದ ದೈನಂದಿನ ತರಗತಿ ಕಲಿಕಾ ಪ್ರಕ್ರಿಯೆಯೊಂದಿಗೆ ಸಂಯೋಜಿತವಾದ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ (CCE) ಪೂರಕವಾಗಿಸುವುದು.

ಐಕ್ಯಗಾನ – ಪ್ರಶ್ನಕೋಠಿ

ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ
ತರಗತಿ -6 ವಿಷಯ – ಕನ್ನಡ (SL) ಪಾಠ – ೧೦: ಐಕ್ಯಗಾನ

ಕಲಿಕಾ ಉದ್ದೇಶಗಳು (Learning Outcomes)

  1. ರಾಷ್ಟ್ರೀಯ ಐಕ್ಯತೆ ಮತ್ತು ಭಾವೈಕ್ಯತೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವರು.
  2. ಕವನದ ಆಶಯಕ್ಕೆ ಸಂಬಂಧಿಸಿದ ಪ್ರಕೃತಿಯ ನಿದರ್ಶನಗಳನ್ನು ಗುರುತಿಸುವರು.
  3. ಕವಿ ಜಿ.ಎಸ್. ಶಿವರುದ್ರಪ್ಪ ಅವರ ಪರಿಚಯವನ್ನು ತಿಳಿಯುವರು.
  4. ಕನ್ನಡದ ಹೊಸ ಪದಗಳ ಅರ್ಥ, ವಿರುದ್ಧಾರ್ಥಕ ಮತ್ತು ಸಮಾನಾರ್ಥಕ ಪದಗಳನ್ನು ತಿಳಿಯುವರು.
  5. ಕವನಗಳ ಸಾಲುಗಳನ್ನು ಪೂರ್ಣಗೊಳಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳುವರು.
  6. ಕೊಟ್ಟಿರುವ ಪದಗಳನ್ನು ಬಿಡಿಸಿ ಬರೆಯುವ ವಿಧಾನವನ್ನು ಕಲಿಯುವರು.

ಭಾಗ-೧: ಬಿಟ್ಟ ಸ್ಥಳ ತುಂಬಿರಿ ಮತ್ತು ಪದ್ಯ ಪೂರ್ಣಗೊಳಿಸಿ

1. ಈ ದೇಶದೊಳೆಲ್ಲಿದ್ದರು ______ ನಮಗೊಂದೇ.
ಭಾರತ
2. ಹಲವು ಕೊಂಬೆಗಳ ಚಾಚಿಕೊಂಡರೂ ಮರಕ್ಕೆ ______ ಒಂದೇ.
ಬುಡ
3. ಸಾವಿರ ನದಿಗಳು ಹೇಗೆ ಹರಿದರೂ ಕೂಡುವ ______ ಒಂದೇ.
ಕಡಲು
4. ಇರುಳಿಗೆ ಸಾಸಿರ ಚಿಕ್ಕೆಗಳಿದ್ದರು ಹಗಲಿಗೆ ______ ಒಂದೇ.
ರವಿ
5. ಅಗಣಿತ ಗ್ರಹಮಂಡಲಗಳ ಚಲನೆಗೆ ______ ಒಂದೇ.
ಆಕಾಶ
6. ನೂರುಬಗೆಯ ಆರಾಧನೆಯಿದ್ದರು ದೇವರು ______ ಒಂದೇ.
ಎಲ್ಲರಿಗೇ
7. ಹಲವು ಬಣ್ಣಗಳ ಹಸುಗಳು ಕರೆಯುವ ಹಾಲಿನ ______ ಒಂದೇ.
ಬಿಳುಪು
8. ನಡೆ-ನುಡಿ ಭೇದಗಳಷ್ಟೇ ಇದ್ದರು ಬದುಕುವ ______ ಒಂದೇ.
ಜನ
9. ನೆಳಲು-ಬೆಳಕುಗಳ ರೆಕ್ಕೆಯ ಬಿಚ್ಚುತ ಹಾರಾಡುವ ______ ಒಂದೇ.
ಧ್ವಜ
10. ಕವಿ ಪ್ರಕೃತಿಯ ಹಲವು ನಿದರ್ಶನಗಳ ಮೂಲಕ ______ ಸಂದೇಶವನ್ನು ಸ್ಪಷ್ಟಪಡಿಸಿದ್ದಾರೆ.
ಭಾವೈಕ್ಯತೆ

ಪದ್ಯದ ಸಾಲುಗಳನ್ನು ಪೂರ್ಣಗೊಳಿಸಿರಿ:

11. ಸಾವಿರ ನದಿಗಳು ಹೇಗೆ ಹರಿದರೂ ________.
ಕೂಡುವ ಕಡಲೊಂದೇ
12. ಅಗಣಿತ ಗ್ರಹಮಂಡಲಗಳ ಚಲನೆಗೆ ________.
ಆಕಾಶವು ಒಂದೇ
13. ನೂರು ಬಗೆಯ ಆರಾಧನೆಯಿದ್ದರು ________.
ದೇವರು ಎಲ್ಲರಿಗೊಂದೇ
14. ಹಲವು ಕೊಂಬೆಗಳ ಚಾಚಿಕೊಂಡರೂ ________.
ಮರಕ್ಕೆ ಬುಡ ಒಂದೇ
15. ನಡೆ-ನುಡಿ ಭೇದಗಳಷ್ಟೇ ಇದ್ದರು ________.
ಬದುಕುವ ಜನ ಒಂದೇ
16. ನೆಳಲು-ಬೆಳಕುಗಳ ರೆಕ್ಕೆಯ ಬಿಚ್ಚುತ ________.
ಹಾರಾಡುವ ಧ್ವಜ ಒಂದೇ

ಭಾಗ-೨: ಸರಿಯಾದ ಉತ್ತರ ಆರಿಸಿ ಬರೆಯಿರಿ (MCQs)

17. ‘ಐಕ್ಯಗಾನ’ ಪದ್ಯದ ಕವಿ ಯಾರು?
ಅ) ಕುವೆಂಪು ಆ) ಡಿ.ವಿ.ಜಿ ಇ) ಜಿ.ಎಸ್. ಶಿವರುದ್ರಪ್ಪ ಈ) ದ.ರಾ.ಬೇಂದ್ರೆ
ಇ) ಜಿ.ಎಸ್. ಶಿವರುದ್ರಪ್ಪ
18. ಜಿ.ಎಸ್. ಶಿವರುದ್ರಪ್ಪ ಅವರಿಗೆ ಯಾವ ಬಿರುದು ಲಭಿಸಿದೆ?
ಅ) ನಾಡೋಜ ಆ) ರಾಷ್ಟ್ರಕವಿ ಇ) ಕವಿಸಾರ್ವಭೌಮ ಈ) ಕರ್ನಾಟಕ ರತ್ನ
ಆ) ರಾಷ್ಟ್ರಕವಿ
19. ‘ಐಕ್ಯಗಾನ’ ಕವನವನ್ನು ಯಾವ ಸಂಕಲನದಿಂದ ಆಯ್ದುಕೊಳ್ಳಲಾಗಿದೆ?
ಅ) ಸಾಮಗಾನ ಆ) ಕಾರ್ತೀಕ ಇ) ಪ್ರೀತಿ ಇಲ್ಲದ ಮೇಲೆ ಈ) ಗೋಡೆ
ಇ) ಪ್ರೀತಿ ಇಲ್ಲದ ಮೇಲೆ
20. ‘ಹಲವು ಕೊಂಬೆಗಳ ಚಾಚಿಕೊಂಡರೂ ಮರಕ್ಕೆ ಬುಡ ಒಂದೇ’ – ಇಲ್ಲಿ ಬುಡ ಏನನ್ನು ಸಂಕೇತಿಸುತ್ತದೆ?
ಅ) ವಿವಿಧತೆ ಆ) ಏಕತೆ ಇ) ಬೆಳವಣಿಗೆ ಈ) ಎಲೆಗಳು
ಆ) ಏಕತೆ
21. ‘ಅಗಣಿತ’ ಪದದ ಅರ್ಥವೇನು?
ಅ) ಲೆಕ್ಕಕ್ಕೆ ಸಿಗುವ ಆ) ಸಂಖ್ಯೆ ಇ) ಲೆಕ್ಕವಿಲ್ಲದಷ್ಟು (ಅಸಂಖ್ಯ) ಈ) ಕಡಿಮೆ
ಇ) ಲೆಕ್ಕವಿಲ್ಲದಷ್ಟು (ಅಸಂಖ್ಯ)
22. ‘ಇರುಳಿಗೆ ಸಾಸಿರ ಚಿಕ್ಕೆಗಳಿದ್ದರು ಹಗಲಿಗೆ ರವಿ ಒಂದೇ’ – ಇಲ್ಲಿ ‘ರವಿ’ ಎಂದರೆ ಏನು?
ಅ) ಚಂದ್ರ ಆ) ನಕ್ಷತ್ರ ಇ) ಸೂರ್ಯ ಈ) ರಾತ್ರಿ
ಇ) ಸೂರ್ಯ
23. ಜಿ.ಎಸ್. ಶಿವರುದ್ರಪ್ಪ ಅವರ ‘ಕಾವ್ಯಾರ್ಥ ಚಿಂತನ’ ಕೃತಿಗೆ ಯಾವ ಪ್ರಶಸ್ತಿ ಲಭಿಸಿದೆ?
ಅ) ಪಂಪ ಪ್ರಶಸ್ತಿ ಆ) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇ) ನೃಪತುಂಗ ಪ್ರಶಸ್ತಿ ಈ) ಜ್ಞಾನಪೀಠ ಪ್ರಶಸ್ತಿ
ಆ) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
24. ಗ್ರಹಮಂಡಲಗಳ ಚಲನೆಗೆ ಯಾವುದು ಒಂದೇ ಆಗಿದೆ?
ಅ) ಭೂಮಿ ಆ) ಗ್ರಹ ಇ) ಆಕಾಶ ಈ) ಗಾಳಿ
ಇ) ಆಕಾಶ
25. ‘ಸಾಸಿರ’ ಪದದ ಅರ್ಥ ಏನು?
ಅ) ಸಾವಿರ ಆ) ಕಡಿಮೆ ಇ) ನೂರು ಈ) ಹತ್ತು
ಅ) ಸಾವಿರ
26. ಕವಿ ಜಿ.ಎಸ್. ಶಿವರುದ್ರಪ್ಪ ಅವರು ಯಾವ ತಾಲ್ಲೂಕಿನಲ್ಲಿ ಜನಿಸಿದರು?
ಅ) ಭದ್ರಾವತಿ ಆ) ಶಿಕಾರಿಪುರ ಇ) ತೀರ್ಥಹಳ್ಳಿ ಈ) ಸಾಗರ
ಆ) ಶಿಕಾರಿಪುರ
27. ‘ಹಸುಗಳು ಕರೆಯುವ ಹಾಲಿನ ಬಿಳುಪು ಒಂದೇ’ – ಇದು ಯಾವುದರ ಸಂಕೇತವಾಗಿದೆ?
ಅ) ಧರ್ಮ ಭೇದ ಆ) ಮೂಲಭೂತ ಏಕತೆ ಇ) ಬಣ್ಣದ ವ್ಯತ್ಯಾಸ ಈ) ಕಸಬು
ಆ) ಮೂಲಭೂತ ಏಕತೆ
28. ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
ಅ) ಕುವೆಂಪು ಆ) ಜಿ.ಎಸ್. ಶಿವರುದ್ರಪ್ಪ ಇ) ಶಿವರಾಮ ಕಾರಂತ ಈ) ದೇ. ಜವರೇಗೌಡ
ಆ) ಜಿ.ಎಸ್. ಶಿವರುದ್ರಪ್ಪ
29. ‘ಬುಡ’ ಪದದ ಅರ್ಥ ಏನು?
ಅ) ತುದಿಯ ಆ) ಬೇರು/ಮೂಲ ಇ) ಕೊಂಬೆ ಈ) ಹೂವು
ಆ) ಬೇರು/ಮೂಲ
30. ಕವಿಗಳ ಪ್ರಕಾರ ಭಾರತೀಯರಲ್ಲಿ ಏಕತಾಭಾವ ಬಲವಾದರೆ ದೇಶ ಏನು ಸಾಧಿಸಲು ಸಾಧ್ಯ?
ಅ) ವಿಭಜನೆ ಆ) ಪ್ರಗತಿ ಇ) ನಷ್ಟ ಈ) ಭೇದ
ಆ) ಪ್ರಗತಿ
31. ಐಕ್ಯಗಾನ ಪದ್ಯದಲ್ಲಿ ಹಾರಾಡುವ ಧ್ವಜಕ್ಕೆ ಹೋಲಿಸಿರುವ ರೆಕ್ಕೆಗಳು ಯಾವುವು?
ಅ) ನೀಲಿ-ಕೆಂಪು ಆ) ನೆಳಲು-ಬೆಳಕು ಇ) ಹಗಲು-ಇರುಳು ಈ) ಮರ-ನದಿ
ಆ) ನೆಳಲು-ಬೆಳಕು

ಭಾಗ-೩: ಒಂದು ಪದ/ವಾಕ್ಯದಲ್ಲಿ ಉತ್ತರಿಸಿ

32. ‘ಐಕ್ಯಗಾನ’ ಕವನದ ಕವಿ ಯಾರು?
ಡಾ. ಜಿ.ಎಸ್. ಶಿವರುದ್ರಪ್ಪ.
33. ಭಾರತವನ್ನು ಯಾವ ಆಧಾರದ ಮೇಲೆ ವಿಶಿಷ್ಟ ರಾಷ್ಟ್ರ ಎಂದು ಕರೆಯಲಾಗುತ್ತದೆ?
ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ಆಧಾರದ ಮೇಲೆ.
34. ಕವಿ ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಸ್ಥಳದ ಹೆಸರು ಏನು?
ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮ.
35. ಮರಕ್ಕೆ ಎಷ್ಟೇ ಕೊಂಬೆಗಳಿದ್ದರೂ ಯಾವುದು ಒಂದೇ?
ಬುಡ.
36. ಸಾವಿರ ನದಿಗಳು ಹರಿದು ಎಲ್ಲಿ ಸೇರುತ್ತವೆ?
ಕಡಲಿನಲ್ಲಿ.
37. ಇರುಳಿಗೆ ಎಷ್ಟೇ ಚಿಕ್ಕೆಗಳಿದ್ದರೂ ಹಗಲಿಗೆ ಯಾವುದು ಒಂದೇ?
ರವಿ (ಸೂರ್ಯ).
38. ‘ಗ್ರಹಮಂಡಲ’ ಎಂದರೆ ಏನು?
ಗ್ರಹ ಮತ್ತು ಉಪಗ್ರಹಗಳ ಸಮೂಹ.
39. ಹಾಲಿನ ಬಿಳುಪು ಏನನ್ನು ಸಂಕೇತಿಸುತ್ತದೆ?
ಎಲ್ಲರ ಮೂಲ ಒಂದೇ ಎಂಬ ಏಕತಾ ಭಾವ.
40. ನೂರು ಬಗೆಯ ಆರಾಧನೆಯಿದ್ದರೂ ಯಾವುದು ಎಲ್ಲರಿಗೂ ಒಂದೇ ಆಗಿದೆ?
ದೇವರು.
41. ನೆಳಲು ಮತ್ತು ಬೆಳಕುಗಳ ರೆಕ್ಕೆಗಳನ್ನು ಬಿಚ್ಚುತ್ತಾ ಹಾರಾಡುವುದು ಯಾವುದು?
ಧ್ವಜ.

ಭಾಗ-೪: ಪದಜ್ಞಾನ (ಸಮಾನಾರ್ಥಕ, ವಿರುದ್ಧಾರ್ಥಕ, ವ್ಯಾಕರಣ)

ಸಮಾನಾರ್ಥಕ ಪದಗಳು (Synonyms) ಬರೆಯಿರಿ:

42. ಮರ
ವೃಕ್ಷ, ತರು
43. ನಕ್ಷತ್ರ
ತಾರೆ, ಚಿಕ್ಕೆ
44. ಇರುಳು
ಕತ್ತಲೆ, ರಾತ್ರಿ
45. ಆರಾಧನೆ
ಪೂಜೆ, ಧ್ಯಾನ
46. ಸಾಸಿರ
ಸಾವಿರ, ಸಹಸ್ರ

ವಿರುದ್ಧಾರ್ಥಕ ಪದಗಳು (Opposites) ಬರೆಯಿರಿ:

47. ಹಗಲು X
ಇರುಳು (ರಾತ್ರಿ)
48. ಭೇದ X
ಅಭೇದ (ಏಕತೆ)
49. ನೆಳಲು X
ಬೆಳಕು
50. ಹಲವು X
ಒಂದು (ಅಥವಾ) ಕೆಲವು
51. ಒಂದೇ X
ಹಲವು (ಅಥವಾ) ಬೇರೆ ಬೇರೆ

ಪದಗಳನ್ನು ಬಿಡಿಸಿ ಬರೆಯಿರಿ: (ಉದಾ: ನಾವೆಲ್ಲರು = ನಾವು + ಎಲ್ಲರು)

52. ದೇಶದೊಳೆಲ್ಲಿದ್ದರು
ದೇಶದೊಳು + ಎಲ್ಲಿದ್ದರು
53. ನಮಗೊಂದೆ
ನಮಗೆ + ಒಂದೇ
54. ಕಡಲೊಂದೆ
ಕಡಲು + ಒಂದೇ
55. ಚಿಕ್ಕೆಗಳಿದ್ದರು
ಚಿಕ್ಕೆಗಳು + ಇದ್ದರು
56. ಬಿಳುಪೊಂದೆ
ಬಿಳುಪು + ಒಂದೇ

ಭಾಗ-೫: ೨-೩ ವಾಕ್ಯಗಳಲ್ಲಿ ಉತ್ತರಿಸಿ

57. ಐಕ್ಯಗಾನ ಪದ್ಯದಲ್ಲಿ ಮರದ ಕೊಂಬೆ ಹಾಗೂ ಬುಡ ಏನನ್ನು ಸಂಕೇತಿಸುತ್ತವೆ?
ಮರದ ಕೊಂಬೆಗಳು ಭಾರತದ ವಿವಿಧತೆಯನ್ನು (ವಿಭಿನ್ನ ಜಾತಿ, ಧರ್ಮ, ಭಾಷೆ, ಸಂಸ್ಕೃತಿ) ಸಂಕೇತಿಸುತ್ತವೆ. ಬುಡವು ಎಲ್ಲರಿಗೂ ಒಂದೇ ಆಗಿರುವ ಭಾರತ ಮಾತೆಯ ಮೂಲ ಮತ್ತು ಏಕತಾ ಭಾವವನ್ನು ಸಂಕೇತಿಸುತ್ತದೆ.
58. ಐಕ್ಯಗಾನ ಪದ್ಯದಲ್ಲಿ ಹಸುಗಳ ಬಣ್ಣ ಹಾಗೂ ಹಾಲಿನ ಬಿಳುಪು ಏನನ್ನು ಧ್ವನಿಸುತ್ತವೆ?
ಹಸುಗಳ ಹಲವು ಬಣ್ಣಗಳು (ವೈವಿಧ್ಯತೆ) ಮನುಷ್ಯರ ನಡುವಿನ ಜಾತಿ, ಧರ್ಮ, ಬಣ್ಣದ ಭೇದಗಳನ್ನು ಸೂಚಿಸುತ್ತವೆ. ಆದರೆ, ಆ ಎಲ್ಲಾ ಬಣ್ಣದ ಹಸುಗಳು ಕೊಡುವ ಹಾಲಿನ ಬಿಳುಪು ಒಂದೇ ಆಗಿದ್ದು, ಅದು ಮನುಷ್ಯರೆಲ್ಲರ ಮೂಲಭೂತ ಏಕತೆಯನ್ನು, ಅಂದರೆ ನಾವೆಲ್ಲರೂ ಒಂದೇ ಎಂಬ ಭಾವವನ್ನು ಧ್ವನಿಸುತ್ತದೆ.
59. ಕಡಲು ಮತ್ತು ಆಕಾಶವು ಏಕತೆಯನ್ನು ಹೇಗೆ ತಿಳಿಸುತ್ತವೆ?
ಸಾವಿರಾರು ನದಿಗಳು ಬೇರೆ ಬೇರೆ ಕಡೆಯಿಂದ ಹರಿದು ಬಂದರೂ ಸೇರುವುದು ಒಂದೇ ಕಡಲಿನಲ್ಲಿ. ಅದೇ ರೀತಿ, ಅಗಣಿತ ಗ್ರಹಮಂಡಲಗಳು ಚಲಿಸುತ್ತಿದ್ದರೂ ಅವುಗಳೆಲ್ಲ ಇರುವುದು ಒಂದೇ ಆಕಾಶದಲ್ಲಿ. ಈ ಮೂಲಕ ಕಡಲು ಮತ್ತು ಆಕಾಶವು ಎಲ್ಲರಿಗೂ ಒಂದೇ ಎಂಬ ಏಕತೆಯ ಮಹತ್ವವನ್ನು ತಿಳಿಸುತ್ತವೆ.
60. ಭಾರತವನ್ನು ಏಕೆ ವಿಶಿಷ್ಟ ರಾಷ್ಟ್ರ ಎಂದು ಕರೆಯಲಾಗುತ್ತದೆ?
ಭಾರತವು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ವೈವಿಧ್ಯತೆಯಿಂದ ಕೂಡಿದೆ. ಇಲ್ಲಿನ ಜನರ ಉಡುಗೆ, ತೊಡುಗೆ, ಭಾಷೆ, ಕಸುಬು ಎಲ್ಲವೂ ಭಿನ್ನವಾಗಿದ್ದರೂ, “ನಾವು ಭಾರತೀಯರು” ಎನ್ನುವ ಏಕತಾ ಭಾವ ಎಲ್ಲರಲ್ಲೂ ಮನೆಮಾಡಿದೆ. ಹೀಗಾಗಿ, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ವಿಶಿಷ್ಟ ರಾಷ್ಟ್ರ ಎಂದು ಭಾರತವನ್ನು ಕರೆಯಲಾಗುತ್ತದೆ.

Join WhatsApp Channel Join Now
Telegram Group Join Now