KARNATAKA NMMS – 8ನೇ ತರಗತಿ ವಿಜ್ಞಾನ
ಪಾಠ: ವಿದ್ಯುಚ್ಛಕ್ತಿ: ಕಾಂತೀಯ ಮತ್ತು ಉಷ್ಣದ ಪರಿಣಾಮಗಳು
ಒಟ್ಟು ಅಂಕಗಳು: 20 | ಮಾಧ್ಯಮ: ಕನ್ನಡ
NMMS ಪರೀಕ್ಷೆಯ ಪುನರಾವರ್ತನೆಗೆ ಪ್ರಮುಖ ಅಂಶಗಳು
- ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ: ವಾಹಕದ ಮೂಲಕ ವಿದ್ಯುತ್ ಪ್ರವಹಿಸಿದಾಗ ಅದರ ಸುತ್ತಲೂ ಕಾಂತಕ್ಷೇತ್ರ ಉಂಟಾಗುತ್ತದೆ. ಇದನ್ನು 1820 ರಲ್ಲಿ ಹ್ಯಾನ್ಸ್ ಕ್ರಿಶ್ಚಿಯನ್ ಆರ್ಸೆಡ್ ಕಂಡುಹಿಡಿದರು.
- ವಿದ್ಯುತ್ಕಾಂತ: ಕಾಂತದಂತೆ ವರ್ತಿಸುವ ವಿದ್ಯುತ್ ಪ್ರವಾಹವಿರುವ ಸುರುಳಿ. ಸುರುಳಿಯ ಒಳಗೆ ಕಬ್ಬಿಣದ ತಿರುಳನ್ನು ಬಳಸಿದಾಗ ಮತ್ತು ಸುರುಳಿಯ ಸುತ್ತುಗಳ ಸಂಖ್ಯೆ ಹೆಚ್ಚಿಸಿದಾಗ ಇದು ಹೆಚ್ಚು ಬಲಯುತವಾಗುತ್ತದೆ.
- ಭೂಮಿಯ ಕಾಂತಕ್ಷೇತ್ರ: ಭೂಮಿಯ ಆಳದಲ್ಲಿರುವ ತಿರುಳಿನಲ್ಲಿ ದ್ರವರೂಪದ ಕಬ್ಬಿಣದ ಚಲನೆಯು ವಿದ್ಯುತ್ ಪ್ರವಾಹವನ್ನು ಉಂಟುಮಾಡಿ, ಕಾಂತಕ್ಷೇತ್ರವನ್ನು ನಿರ್ಮಿಸುತ್ತದೆ.
- ವಿದ್ಯುತ್ ಪ್ರವಾಹದ ಉಷ್ಟೋತ್ಪಾದನಾ ಪರಿಣಾಮ: ವಾಹಕವು ಒಡ್ಡುವ ರೋಧದಿಂದಾಗಿ ವಿದ್ಯುತ್ ಹರಿಯುವಾಗ ಉಷ್ಣ ಉತ್ಪತ್ತಿಯಾಗುತ್ತದೆ.
- ನೈಕ್ರೋಮ್ ತಂತಿ: ಇದು ತಾಮ್ರದ ತಂತಿಗಿಂತ ಹೆಚ್ಚಿನ ರೋಧವನ್ನು ಒಡ್ಡುತ್ತದೆ. ಆದ್ದರಿಂದ ಇದನ್ನು ಹೀಟರ್, ಇಸ್ತ್ರಿಪೆಟ್ಟಿಗೆ ಮುಂತಾದ ಉಷ್ಣ ಸಾಧನಗಳಲ್ಲಿ ಕಾಸುವ ಘಟಕವಾಗಿ ಬಳಸುತ್ತಾರೆ.
- ವೋಲ್ಟಾಯಿಕ್ ಕೋಶ: ಇದನ್ನು ಅಲೆಕ್ಸಾಂಡ್ರೆ ವೋಲ್ಟಾ ಕಂಡುಹಿಡಿದರು. ಇದು ಎರಡು ವಿಭಿನ್ನ ಲೋಹದ ವಿದ್ಯುದಗ್ರಗಳನ್ನು ಮತ್ತು ವಿದ್ಯುದ್ವಿಭಾಜ್ಯ ಎಂಬ ದ್ರವವನ್ನು ಹೊಂದಿರುತ್ತದೆ.
- ಶುಷ್ಕಕೋಶ (Dry cell): ಇದರಲ್ಲಿ ವಿದ್ಯುದ್ವಿಭಾಜ್ಯವು ದ್ರವರೂಪದಲ್ಲಿರದೆ ದಪ್ಪನೆಯ ಪೇಸ್ಟ್ ರೂಪದಲ್ಲಿರುತ್ತದೆ. ಸತುವಿನ ಪಾತ್ರೆ ಋಣಾಗ್ರವಾಗಿ ಮತ್ತು ಕಾರ್ಬನ್ ಕಡ್ಡಿ ಧನಾಗ್ರವಾಗಿ ಕೆಲಸ ಮಾಡುತ್ತದೆ.
- ಪುನಃಶ್ಚತನಗೊಳಿಸಬಹುದಾದ ಬ್ಯಾಟರಿಗಳು: ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳಲ್ಲಿ ಬಳಸುವ ಲಿಥಿಯಂ-ಅಯಾನ್ (Li-ion) ಬ್ಯಾಟರಿಗಳನ್ನು ಮತ್ತೆ ಮತ್ತೆ ಚಾರ್ಜ್ ಮಾಡಿ ಬಳಸಬಹುದು.
ಪ್ರಶ್ನೆ: 1 / 20
ಅಂಕ: 1
ವಿವರಣೆ:
ಪರೀಕ್ಷೆಯ ಫಲಿತಾಂಶ
ಶೇಕಡಾವಾರು: %
ಸರಿಯಾದ ಉತ್ತರಗಳು:
ತಪ್ಪಾದ ಉತ್ತರಗಳು:
ಉತ್ತರಿಸದ ಪ್ರಶ್ನೆಗಳು:

