Karnataka NMMS Class 8 Science Chapter 7 | Nature of Particles of Matter MCQ Test Kannada

ಕರ್ನಾಟಕ NMMS ಪರೀಕ್ಷೆಗೆ ತಯಾರಿ ನಡೆಸುತ್ತಿರುವ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನದ 'ದ್ರವ್ಯದ ಕಣಗಳ ಸ್ವಭಾವ' ಪಾಠದ ಉಚಿತ ಆನ್‌ಲೈನ್ MCQ ಅಭ್ಯಾಸ ಪರೀಕ್ಷೆ.

Karnataka NMMS Class 8 Science Test

KARNATAKA NMMS – 8ನೇ ತರಗತಿ ವಿಜ್ಞಾನ

ಪಾಠ: ದ್ರವ್ಯದ ಕಣಗಳ ಸ್ವಭಾವ

ಒಟ್ಟು ಅಂಕಗಳು: 20 | ಮಾಧ್ಯಮ: ಕನ್ನಡ

ಈ ಆನ್‌ಲೈನ್ ಪರೀಕ್ಷೆಯು ದ್ರವ್ಯದ ಕಣಗಳ ಸ್ವಭಾವ ಪಾಠದ ಪ್ರಮುಖ ಪರಿಕಲ್ಪನೆಗಳಾದ ಅಂತರಕಣ ಆಕರ್ಷಣೆ, ಅಂತರಕಣ ಸ್ಥಳಾವಕಾಶ, ಮತ್ತು ದ್ರವ್ಯದ ಮೂರು ಸ್ಥಿತಿಗಳ (ಘನ, ದ್ರವ, ಅನಿಲ) ಲಕ್ಷಣಗಳನ್ನು ಒಳಗೊಂಡಿದೆ. ಪ್ರತಿ ಪ್ರಶ್ನೆಗೆ ಉತ್ತರಿಸಿ ಮತ್ತು ನಿಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಿ.

NMMS ಪರೀಕ್ಷೆಯ ಪುನರಾವರ್ತನೆಗೆ ಪ್ರಮುಖ ಅಂಶಗಳು

  • ಪರಮಾಣು ಪರಿಕಲ್ಪನೆ: ಪ್ರಾಚೀನ ಭಾರತದ ತತ್ವಜ್ಞಾನಿ ಆಚಾರ್ಯ ಕಣಾದ ಅವರು ದ್ರವ್ಯವು ‘ಪರಮಾಣು’ ಎಂಬ ಅವಿಭಾಜ್ಯ ಕಣಗಳಿಂದ ಮಾಡಲ್ಪಟ್ಟಿದೆ ಎಂದು ‘ವೈಶೇಷಿಕ ಸೂತ್ರಗಳು’ ಕೃತಿಯಲ್ಲಿ ಮೊದಲು ತಿಳಿಸಿದರು.
  • ಘಟಕಕಣಗಳು (Particles): ಪ್ರತಿಯೊಂದು ದ್ರವ್ಯವೂ ಅಧಿಕ ಸಂಖ್ಯೆಯ ಅತ್ಯಂತ ಸಣ್ಣ ಘಟಕಕಣಗಳಿಂದ ಮಾಡಲ್ಪಟ್ಟಿದೆ.
  • ಅಂತರಕಣ ಸ್ಥಳಾವಕಾಶ (Intermolecular Space): ಕಣಗಳ ನಡುವೆ ಇರುವ ಜಾಗ. ಘನವಸ್ತುಗಳಲ್ಲಿ ಇದು ಕನಿಷ್ಟ, ದ್ರವಗಳಲ್ಲಿ ಸ್ವಲ್ಪ ಹೆಚ್ಚು ಮತ್ತು ಅನಿಲಗಳಲ್ಲಿ ಗರಿಷ್ಟವಾಗಿರುತ್ತದೆ.
  • ಅಂತರಕಣ ಆಕರ್ಷಣೆ (Intermolecular Force): ಕಣಗಳನ್ನು ಒಟ್ಟಿಗೆ ಬಂಧಿಸಿರುವ ಆಕರ್ಷಣ ಬಲ. ಘನಗಳಲ್ಲಿ ಇದು ಗರಿಷ್ಟ, ದ್ರವಗಳಲ್ಲಿ ದುರ್ಬಲ ಮತ್ತು ಅನಿಲಗಳಲ್ಲಿ ನಗಣ್ಯ (ಕನಿಷ್ಟ) ಆಗಿರುತ್ತದೆ.
  • ಘನವಸ್ತುಗಳು (Solids): ನಿರ್ದಿಷ್ಟ ಆಕಾರ ಮತ್ತು ಗಾತ್ರ ಹೊಂದಿವೆ. ಕಣಗಳು ಕೇವಲ ತಮ್ಮ ಸ್ಥಾನಗಳಲ್ಲಿ ಕಂಪಿಸುತ್ತವೆ (vibrate).
  • ದ್ರವಗಳು (Liquids): ನಿರ್ದಿಷ್ಟ ಗಾತ್ರ ಹೊಂದಿವೆ ಆದರೆ ನಿರ್ದಿಷ್ಟ ಆಕಾರವಿಲ್ಲ (ಸಂಗ್ರಾಹಕದ ಆಕಾರ ಪಡೆಯುತ್ತವೆ). ಕಣಗಳು ಸೀಮಿತ ಜಾಗದಲ್ಲಿ ಚಲಿಸುತ್ತವೆ.
  • ಅನಿಲಗಳು (Gases): ನಿರ್ದಿಷ್ಟ ಆಕಾರ ಮತ್ತು ಗಾತ್ರ ಎರಡೂ ಇಲ್ಲ. ಕಣಗಳು ಎಲ್ಲಾ ದಿಕ್ಕುಗಳಲ್ಲಿ ಮುಕ್ತವಾಗಿ ಚಲಿಸುತ್ತವೆ. ಅನಿಲಗಳನ್ನು ಸುಲಭವಾಗಿ ಸಂಕುಚಿಸಬಹುದು (Compressibility).
  • ಉಷ್ಣತೆಯ ಪ್ರಭಾವ: ಉಷ್ಣವನ್ನು ಒದಗಿಸಿದಾಗ ಕಣಗಳ ಉಷ್ಣ ಶಕ್ತಿ (Thermal energy) ಹೆಚ್ಚಾಗಿ, ಕಣಗಳ ಚಲನೆ ವೇಗವಾಗುತ್ತದೆ (ಉದಾ: ಬಿಸಿ ನೀರಿನಲ್ಲಿ ಬಣ್ಣ ವೇಗವಾಗಿ ಹರಡುತ್ತದೆ).
  • ಆವೀಕರಣ ಮತ್ತು ದ್ರವನ ಬಿಂದು: ಘನವು ದ್ರವವಾಗುವ ಕನಿಷ್ಟ ತಾಪ ‘ದ್ರವನ ಬಿಂದು’ (Melting point). ದ್ರವವು ಕುದಿಯುವ ಬಿಂದುವಿಗಿಂತ ಕಡಿಮೆ ತಾಪದಲ್ಲಿ ನಿಧಾನವಾಗಿ ಆವಿಯಾಗುವುದನ್ನು ‘ಆವೀಕರಣ’ (Evaporation) ಎನ್ನುವರು.
ಪ್ರಶ್ನೆ: 1 / 20 ಅಂಕ: 1
ವಿವರಣೆ:

ಪರೀಕ್ಷೆಯ ಫಲಿತಾಂಶ

ಶೇಕಡಾವಾರು:
%
ಸರಿಯಾದ ಉತ್ತರಗಳು:
ತಪ್ಪಾದ ಉತ್ತರಗಳು:
ಉತ್ತರಿಸದ ಪ್ರಶ್ನೆಗಳು:

ಪ್ರಶ್ನೆವಾರು ವಿಮರ್ಶೆ (Review)

Join WhatsApp Channel Join Now
Telegram Group Join Now