Class-4 Kannada SA-2 Model Question Paper – 1

Summative Assessment-2 March-2026
ಸಂಕಲನಾತ್ಮಕ ಮೌಲ್ಯಮಾಪನ -2 ಮಾರ್ಚ್-2026
SUMMATIVE ASSESSMENT-2 MARCH-2026
MODEL QUESTION PAPER-1
ತರಗತಿ: 4 (IV)
ವಿಷಯ: ಕಲಿ ಕನ್ನಡ
ಅಂಕಗಳು: 40
ಅವಧಿ: 90 ನಿಮಿಷಗಳು
ಪ್ರಶ್ನೆ 1. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. (1 x 4 = 4)
1. ಸಲೀಂ ಅಲಿ ಅವರು ಯಾರ ಆಶ್ರಯದಲ್ಲಿ ಬೆಳೆದರು?
A) ತಂದೆ B) ತಾಯಿ C) ಸೋದರಮಾವ D) ಗೆಳೆಯರು
ಉತ್ತರ – _________________________________________________________________
2. ಶ್ರೀರಂಗಪಟ್ಟಣ ಯಾವ ಜಿಲ್ಲೆಯಲ್ಲಿದೆ?
A) ಮೈಸೂರು B) ಮಂಡ್ಯ C) ಹಾಸನ D) ಬೆಂಗಳೂರು
ಉತ್ತರ – _________________________________________________________________
3. ‘ಪದಗಳ ಆಟ’ದಲ್ಲಿ ಪ್ರತಿ ವಾಕ್ಯದಲ್ಲಿ ಎಷ್ಟಕ್ಕಿಂತ ಹೆಚ್ಚು ಪದಗಳು ಇರಬಾರದು?
A) 3 B) 4 C) 5 D) 6
ಉತ್ತರ – _________________________________________________________________
4. ಗಾಳಿಪಟವು ಎಲ್ಲಿ ಸಿಲುಕಿಕೊಂಡಿತ್ತು?
A) ಮನೆ B) ಮರ C) ಗಿಡ D) ಆಕಾಶ
ಉತ್ತರ – _________________________________________________________________
ಪ್ರಶ್ನೆ 2. ಬಿಟ್ಟ ಸ್ಥಳಗಳನ್ನು ತುಂಬಿರಿ. (1 x 4 = 4)
1. ತೆಂಗಿನ ಮರವು ಮಾನವರಿಗೆ ____________________ಆಗಿದೆ.
2. ಪೋಷಕರ ಸಹಿ ಇದ್ದರೆ ರಜಾ ಪತ್ರಕ್ಕೆ ಇನ್ನಷ್ಟು ____________________ಬರುತ್ತದೆ.
3. ತಟ್ಟೆಯಲ್ಲಿ ಬಿಸಿಬಿಸಿ ಅನ್ನ ಸಾಂಬಾರು ಬಿದ್ದರೆ ನಾಲಗೆಯಲ್ಲಿ ____________________.
4. ಬಂದನು ____________________ಚಂದ್ರ ಬೆಳದಿಂಗಳು ನಿಬಿಡ ಸಾಂದ್ರ.
ಪ್ರಶ್ನೆ 3. ಒಂದೊಂದು ವಾಕ್ಯದಲ್ಲಿ ಉತ್ತರಿಸಿ (1 x 4 = 4)
1. ಸಲೀಂ ಅಲಿಯವರ ಪತ್ನಿಯ ಹೆಸರೇನು?
ಉತ್ತರ – __________________________________________________________________________________________
2. ಪತ್ರ ಬರೆಯುವಾಗ ಏನು ಮೂಡಿಸಿದರೆ ಸಂತೋಷವಾಗುತ್ತದೆ?
ಉತ್ತರ – __________________________________________________________________________________________
3. ಬಿದಿಗೆ ಚಂದ್ರ ಹೇಗೆ ಕಾಣುತ್ತಿದ್ದಾನೆ?
ಉತ್ತರ – __________________________________________________________________________________________
4. ಮಾವಿನ ಹಣ್ಣು ಹೇಗಿರುತ್ತದೆ?
ಉತ್ತರ – __________________________________________________________________________________________
ಪ್ರಶ್ನೆ 4. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ (2 x 10 = 20)
1. ಡಬ್ಲ್ಯೂ. ಎಸ್. ಮಿಲ್ಲರ್ಡ್ ಅವರು ಬಾಲಕನಿಗೆ ಯಾವ ಹಕ್ಕಿಯ ಬಗ್ಗೆ ತಿಳಿಸಿದರು?
ಉತ್ತರ – __________________________________________________________________________________________
__________________________________________________________________________________________
2. ರಜಾ ಅರ್ಜಿ ಎಂದರೇನು?
ಉತ್ತರ – __________________________________________________________________________________________
__________________________________________________________________________________________
3. ಮದ್ದಿನ ಮನೆಯನ್ನು ಏಕೆ ನಿರ್ಮಿಸಿದ್ದರು?
ಉತ್ತರ – __________________________________________________________________________________________
__________________________________________________________________________________________
4. ಆಲದ ಮರವು ಯಾವುದನ್ನು ಉತ್ಪಾದಿಸುತ್ತದೆ?
ಉತ್ತರ – __________________________________________________________________________________________
__________________________________________________________________________________________
5. ಪುಟ್ಟನು ಗೆಳೆಯರನ್ನು ಏಕೆ ಕರೆದನು?
ಉತ್ತರ – __________________________________________________________________________________________
__________________________________________________________________________________________
6. ‘ಶುಭ+ಉದಯ’ ಮತ್ತು ‘ಕಾಲ+ಅವಕಾಶ’ ಪದಗಳನ್ನು ಕೂಡಿಸಿ ಬರೆಯಿರಿ.
ಉತ್ತರ – __________________________________________________________________________________________
__________________________________________________________________________________________
7. ವಿರುದ್ಧ ಪದ ಬರೆಯಿರಿ: 1) ಭಯ 2) ಜಯ.
ಉತ್ತರ – __________________________________________________________________________________________
__________________________________________________________________________________________
8. ಸ್ವಂತ ವಾಕ್ಯ ರಚಿಸಿ: 1) ಶಾಲೆ 2) ಪ್ರವಾಸ.
ಉತ್ತರ – __________________________________________________________________________________________
__________________________________________________________________________________________
9. ಶ್ರೀರಂಗಪಟ್ಟಣದಲ್ಲಿ ಕೋಟೆಯನ್ನು ಏಕೆ ಕಟ್ಟಿದ್ದಾರೆ?
ಉತ್ತರ – __________________________________________________________________________________________
__________________________________________________________________________________________
10. ಅಷ್ಟಮಿ ಚಂದ್ರ ಮತ್ತು ಹುಣ್ಣಿಮೆ ಚಂದ್ರ ಇವುಗಳಲ್ಲಿ ನಿಮಗೆ ಯಾವುದು ಇಷ್ಟ? ಏಕೆ?
ಉತ್ತರ – __________________________________________________________________________________________
__________________________________________________________________________________________
ಪ್ರಶ್ನೆ 5.
A) ಪದ್ಯವನ್ನು ಪೂರ್ಣಗೊಳಿಸಿ: (4 x 1 = 4)

ಅಷ್ಟಮಿ ಚಂದಿರನು ಬಂದ
_____________________________________________________________________

ಠಾವನು ಕಾಣೆ ಅತ್ತ ಇತ್ತ.
B) ಹೊಂದಿಸಿ ಬರೆಯಿರಿ: (4 x 1 = 4)
‘ಅ’ ಪಟ್ಟಿ
‘ಬ’ ಪಟ್ಟಿ
ಉತ್ತರ
1. ಅರಳಿದ
A. ದೀಪ
________________________
2. ಬೆಳಗುವ
B. ಹೂವಿನ ತೋಟ
________________________
3. ತೆಪ್ಪಿನಾ
C. ಮಿಲ್ಲರ್ಡ್
________________________
4. ಪಕ್ಷಿತಜ್ಞ
D. ಸಲೀಂ ಅಲಿ ಪತ್ನಿ
________________________

ಮಾದರಿ ಉತ್ತರ ಪತ್ರಿಕೆ (MODEL ANSWER SHEET)

ಶಾಲೆ – _____________________________________

ಪ್ರಶ್ನೆ 1: 1) C (ಸೋದರಮಾವ), 2) B (ಮಂಡ್ಯ), 3) C (5 ಪದಗಳು), 4) B (ಮರ).

ಪ್ರಶ್ನೆ 2: 1) ಕಲ್ಪವೃಕ್ಷ, 2) ಗೌರವ, 3) ನೀರೂರುತ್ತದೆ, 4) ಹುಣ್ಣಿವೆಯ.

ಪ್ರಶ್ನೆ 3: 1) ತೆಪ್ಪಿನಾ, 2) ಮನಸ್ಸಿನ ಆಲೋಚನೆಗಳನ್ನು, 3) ದೀಪ ಹಚ್ಚಿದಂತೆ ಜೋಡಿಯಾಗಿ, 4) ಸಿಹಿಯಾಗಿರುತ್ತದೆ.

ಪ್ರಶ್ನೆ 4:
1. ಇದು ‘ಕಾಡುಗುಬ್ಬಚ್ಚಿ’ ಎಂದು ತಿಳಿಸಿದರು.
2. ಗೈರುಹಾಜರಿಯ ಕಾರಣವನ್ನು ತಿಳಿಸಿ ಅನುಮತಿ ಪಡೆಯಲು ಬರೆಯುವ ಪತ್ರವೇ ರಜಾ ಅರ್ಜಿ.
3. ಮದ್ದುಗುಂಡುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಮದ್ದಿನ ಮನೆಯನ್ನು ನಿರ್ಮಿಸಿದ್ದರು.
4. ಆಲದ ಮರವು ಆಮ್ಲಜನಕವನ್ನು ಉತ್ಪಾದಿಸುತ್ತದೆ.
5. ಗಾಳಿಪಟ ಹಾರಿಸಲು ಗೆಳೆಯರ ಬಳಗವನ್ನು ಕರೆಯಲು ಹೋದನು.
6. 1) ಶುಭೋದಯ 2) ಕಾಲಾವಕಾಶ.
7. 1) ಭಯ X ನಿರ್ಭಯ 2) ಜಯ X ಅಪಜಯ.
8. 1) ನನ್ನ ಶಾಲೆ ತುಂಬಾ ಅಂದವಾಗಿದೆ. 2) ನಾವು ಶ್ರೀರಂಗಪಟ್ಟಣಕ್ಕೆ ಪ್ರವಾಸ ಹೋದೆವು.
9. ಊರನ್ನು ಶತ್ರುಗಳಿಂದ ರಕ್ಷಿಸಲು.
10. ಹುಣ್ಣಿಮೆ ಚಂದ್ರ ಇಷ್ಟ, ಏಕೆಂದರೆ ಅದು ತುಂಬಾ ಬೆಳಕು ನೀಡುತ್ತದೆ. (ವಿದ್ಯಾರ್ಥಿಯ ಸ್ವಂತ ಉತ್ತರಕ್ಕೂ ಅಂಕ ನೀಡಬಹುದು).

ಪ್ರಶ್ನೆ 5:
A) ಅರ್ಧಬಿಟ್ಟು ಅರ್ಧ ತಿಂದ / ಉಂಡಿ ಚೆಲ್ಲಿ ಕೊಟ್ಟನಿಲ್ಲಿ / ಹುಡುಗನಾವನು ಅವನ.
B) 1-B, 2-A, 3-D, 4-C.

ಮೌಖಿಕ ಪರೀಕ್ಷೆ (ORAL TEST) – 20 ಪ್ರಶ್ನೆಗಳು

  1. ಪದಗಳ ಆಟದಲ್ಲಿ ಎಷ್ಟು ತಂಡಗಳಿದ್ದವು? (ಎರಡು ತಂಡಗಳು)
  2. ಸಲೀಂ ಅಲಿಯವರಿಗೆ ಪಕ್ಷಿಗಳ ಬಗ್ಗೆ ಕುತೂಹಲ ಮೂಡಿಸಿದ್ದು ಯಾವುದು? (ಸತ್ತು ಬಿದ್ದಿದ್ದ ಹಕ್ಕಿ)
  3. ಸಲೀಂ ಅಲಿ ಜನಿಸಿದ್ದು ಎಲ್ಲಿ? (ಮುಂಬಯಿ)
  4. ಗಾಳಿಪಟ ಯಾವ ಬಣ್ಣದಾಗಿತ್ತು? (ಹಸಿರು)
  5. ಪುಟ್ಟನು ಗಾಳಿಪಟವನ್ನು ಏನನ್ನು ಕೊಟ್ಟು ಕೊಂಡನು? (ಕಾಸು)
  6. ರಜಾ ಅರ್ಜಿಯನ್ನು ಯಾರಿಗೆ ಬರೆಯಬೇಕು? (ತರಗತಿ ಶಿಕ್ಷಕರಿಗೆ ಅಥವಾ ಮುಖ್ಯೋಪಾಧ್ಯಾಯರಿಗೆ)
  7. ಹುಣ್ಣಿವೆಯ ಚಂದ್ರನ ಬೆಳದಿಂಗಳು ಹೇಗಿದೆ? (ನಿಬಿಡ ಸಾಂದ್ರ)
  8. ಬೇಂದ್ರೆಯವರ ಕಾವ್ಯನಾಮ ಯಾವುದು? (ಅಂಬಿಕಾತನಯದತ್ತ)
  9. ಶ್ರೀರಂಗಪಟ್ಟಣ ಯಾವ ಜಿಲ್ಲೆಯಲ್ಲಿದೆ? (ಮಂಡ್ಯ)
  10. ಟಿಪ್ಪು ಸುಲ್ತಾನ್ ಎಲ್ಲಿ ವಾಸವಿದ್ದನು? (ಲಾಲ್‌ಮಹಲ್ ಅರಮನೆ)
  11. ಓದುವ ಶಾಲೆ ಹೇಗಿರಬೇಕು? (ಅರಳಿದ ಹೂವಿನ ತೋಟದ ಹಾಗೆ)
  12. ಶಾಲೆಯ ಚೀಲ ಯಾವುದರ ಹಾಗೆ ಇರಬೇಕು? (ಕಾಮನ ಬಿಲ್ಲಿನ ಹಾಗೆ)
  13. ಉದ್ಯಾನವನದ ಮರಗಳಲ್ಲಿ ಹಿರಿಮಾವ ಯಾರು? (ಮಾವಿನ ಮರ)
  14. ಯಾವ ಮರವನ್ನು ಕಲ್ಪವೃಕ್ಷ ಎನ್ನುತ್ತಾರೆ? (ತೆಂಗಿನ ಮರ)
  15. ದಾಸವಾಳದ ಗಿಡ ಏನು ಹೇಳಿತು? (ನಮ್ಮಲ್ಲಿ ಜಗಳ ಬೇಡ, ನಾವೆಲ್ಲ ಸಮಾನರು)
  16. ‘ಹೂವು’ ಪದದ ಸಮಾನಾರ್ಥಕ ಪದ ಹೇಳಿ. (ಪುಷ್ಪ ಅಥವಾ ಕುಸುಮ)
  17. ‘ಬಹಳ’ ಪದದ ವಿರುದ್ಧ ಪದ ಹೇಳಿ. (ಕಡಿಮೆ)
  18. ‘ದಿನ’ ಪದಕ್ಕೆ ಬಹುವಚನ ಹೇಳಿ. (ದಿನಗಳು)
  19. ‘ಅಮ್ಮ’ ಎನ್ನುವುದು ಯಾವ ಲಿಂಗ? (ಸ್ತ್ರೀಲಿಂಗ)
  20. ‘ಶಾಲೆ’ ಪದ ಬಳಸಿ ಒಂದು ವಾಕ್ಯ ಹೇಳಿ. (ನಾನು ಪ್ರತಿದಿನ ಶಾಲೆಗೆ ಹೋಗುತ್ತೇನೆ)

ಡೌನ್‌ಲೋಡ್ ಲಿಂಕ್‌ಗಳು (Download Links)

DOWNLOAD QUESTION PAPER DOWNLOAD ANSWER SHEET DOWNLOAD ORAL TEST
Join WhatsApp Channel Join Now
Telegram Group Join Now