ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ
ತರಗತಿ -೮ • ವಿಷಯ – ಕನ್ನಡ (SL)
• ಪಾಠ – ೭. ಒಂದು ಮರದ ಬೆಲೆ
MODEL QUESTION BANK OF LESSON BASED ASSESSMENT
(These Questions are only for model)
Lesson Based Assessment
Class – 8
Sub. – Kannada (Second Language)
ಪಾಠ – ೭. ಒಂದು ಮರದ ಬೆಲೆ
2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸುವ ಸಂಬಂಧ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸಾಧಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಲಾಗಿದೆ. ಸದರಿ ಸಾಮಗ್ರಿಯನ್ನು ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸುವುದು ಅತ್ಯವಶ್ಯಕವಾಗಿದೆ.
1. ಪಾಠ ಆಧಾರಿತ ಮೌಲ್ಯಾಂಕನದ (LBA) ಉದ್ದೇಶಗಳು:
ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಿಕೊಳ್ಳುವುದು.
ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವುದು.
ಮಕ್ಕಳ ಪ್ರಗತಿಯನ್ನು ಗುರುತಿಸುವಲ್ಲಿ ಪರೀಕ್ಷಾ ಅವಲಂಬನೆಯನ್ನು ಕಡಿಮೆ ಮಾಡಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.
ನಿರಂತರ ವಿಶ್ಲೇಷಣೆಯಿಂದ ನಿಗದಿತ ಕಲಿಕಾ ಫಲಗಳ ಗಳಿಕೆಗೆ ಅವಕಾಶ ನೀಡುವುದು.
ವಿವಿಧ ಕಲಿಕಾ ಹಂತದ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ Inclusive Assessment ಗೆ ಪ್ರೇರಣೆ ನೀಡುವುದು.
ಶಿಕ್ಷಕರ ಮೌಲ್ಯಮಾಪನ ಸಾಮರ್ಥ್ಯವನ್ನು ಹೆಚ್ಚಿಸುವುದು. (ಮೌಖಿಕ, ಪ್ರಾಯೋಗಿಕ, ಸಹವರ್ತಿ ಮೌಲ್ಯಮಾಪನ ಯೋಜನೆಗಳು, Portfolio, ಸ್ವ-ಮೌಲ್ಯಮಾಪನ ಇತ್ಯಾದಿ…)
ವಿದ್ಯಾರ್ಥಿಗಳ ಕಲಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು.
ಪ್ರತಿ ಹಂತದ ವಿದ್ಯಾರ್ಥಿಯ ಕಲಿಕೆಯನ್ನು ಪೋಷಕರ ಗಮನಕ್ಕೆ ತರುವುದು.
ಪಾಠ ಆಧಾರಿತ ಮೌಲ್ಯಾಂಕನ ಚೌಕಟ್ಟು, ಸಾಂಪ್ರದಾಯಿಕ ಪರೀಕ್ಷಾ ಕೇಂದ್ರಿತ ಮೌಲ್ಯಮಾಪನದಿಂದ ದೈನಂದಿನ ತರಗತಿ ಕಲಿಕಾ ಪ್ರಕ್ರಿಯೆಯೊಂದಿಗೆ ಸಂಯೋಜಿತವಾದ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ (CCE) ಪೂರಕವಾಗಿಸುವುದು.
ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ
ಪಾಠ: ೭. ಒಂದು ಮರದ ಬೆಲೆ
ಕಲಿಕಾ ಫಲಗಳು (Learning Outcomes)
- ಪರಿಸರ ಸಂರಕ್ಷಣೆ ಮತ್ತು ಮರಗಳ ಮಹತ್ವವನ್ನು ಸರಳವಾಗಿ ಅರಿತುಕೊಳ್ಳುವರು.
- ಪಾಠದಲ್ಲಿರುವ ಹೊಸ ಪದಗಳ ಅರ್ಥವನ್ನು ತಿಳಿದು ಗುರುತಿಸುವರು.
- ಸಣ್ಣ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ನೀಡಲು ಕಲಿಯುವರು.
- ಕನ್ನಡದ ಪ್ರಮುಖ ವ್ಯಾಕರಣಾಂಶಗಳಾದ (ವಿರುದ್ಧಾರ್ಥಕ, ಸಮಾನಾರ್ಥಕ, ಲಿಂಗ) ಪದಗಳನ್ನು ಗುರುತಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವರು.
- ಮರಗಳನ್ನು ಕಡಿಯುವುದರ ಕುರಿತು ಬೇರೆ ಬೇರೆ ದೇಶಗಳ ದೃಷ್ಟಿಕೋನವನ್ನು ಸರಳವಾಗಿ ಹೋಲಿಸುವರು.
ಭಾಗ-ಎ: ಒಂದು ಪದ/ವಾಕ್ಯದಲ್ಲಿ ಉತ್ತರಿಸಿರಿ (Answer in a word/sentence)
1. ‘ವೃಕೋ ರಕ್ಷತಿ ರಕ್ಷಿತಃ’ ಎಂದರೆ ಏನು?
2. ವಿಜ್ಞಾನಿಗಳು ಯಾವ ಆತಂಕವನ್ನು ವ್ಯಕ್ತಪಡಿಸಿದ್ದಾರೆ?
3. ಮರವನ್ನು ಕೊಂದ ಅಮೆರಿಕದ ಪ್ರಜೆಯ ಹೆಸರೇನು?
4. ಪಾಲ್ ಕೆಲೆನ್ನಿಗೆ ನ್ಯಾಯಾಲಯ ಎಷ್ಟು ವರ್ಷ ಸಜೆ ವಿಧಿಸಿತು?
5. ಹೌಸ್ಟನ್ ನಗರಪಾಲಿಕೆಗೆ ಮರವನ್ನು ಉಳಿಸಲು ಎಷ್ಟು ದೇಣಿಗೆ ಬಂದಿದೆ?
6. ಬೆಂಗಳೂರಿನಲ್ಲಿ ಯಾವ ಮರವನ್ನು ಕಡಿಯಲು ಯೋಚಿಸಿದ್ದರು?
7. ಅಮೆರಿಕದ ಸಂಸ್ಕೃತಿಗೆ ಎಷ್ಟು ವರ್ಷಗಳ ಇತಿಹಾಸವಿದೆ?
8. ಭಾರತದ ಸಂಸ್ಕೃತಿಗೆ ಎಷ್ಟು ವರ್ಷಗಳ ಇತಿಹಾಸವಿದೆ?
9. ಒಂದು ಮರದಿಂದ ಉತ್ಪಾದನೆಯಾಗುವ ಆಮ್ಲಜನಕದ ಬೆಲೆ ಎಷ್ಟು?
10. ಮರದ ನಿಜವಾದ ಬೆಲೆ ಯಾವುದು ಎಂದು ಲೇಖಕರು ಹೇಳುತ್ತಾರೆ?
ಭಾಗ-ಬಿ: ಖಾಲಿ ಬಿಟ್ಟ ಸ್ಥಳ ತುಂಬಿರಿ (Fill in the blanks)
11. ನಾವು ಮರಗಳನ್ನು ರಕ್ಷಿಸಿದರೆ, ಮರಗಳು ನಮ್ಮನ್ನು ______ ಎನ್ನುವುದು ‘ವೃಕೋ ರಕ್ಷತಿ ರಕ್ಷಿತಃ’ ಇದರ ಅರ್ಥ.
12. ಪಾಲ್ ಕೆಲೆನ್ ಮರವನ್ನು ಕೊಲ್ಲಲು ______ ಬಳಸಿದ.
13. ಪಾಲ್ ಕೆಲೆನ್ನನ್ನು ಕಳೆದ ವರ್ಷ ______ ತಿಂಗಳಿನಲ್ಲಿ ಬಂಧಿಸಲಾಗಿತ್ತು.
14. ಅಮೆರಿಕೆಯ ಟೆಕ್ಸಸ್ ರಾಜ್ಯದ ______ ಎಂಬಲ್ಲಿ ಈ ಘಟನೆ ನಡೆಯಿತು.
15. ಮರದ ಬುಡದಲ್ಲಿ ಸಾವಿರಾರು ಜನ ವೃಕ್ಷಪ್ರೇಮಿಗಳು ______ ಪತ್ರಗಳನ್ನಿಡುತ್ತಿದ್ದಾರೆ.
16. ಭಾರತದಲ್ಲಿ ಮರ ಕತ್ತರಿಸುವುದು ತೀರಾ ಸಾಮಾನ್ಯವಾದ ______ ಆಗಿದೆ.
17. ಕೆಲವು ಮರಗಳ ಕೊಲೆಗಳು ಮೋಸದಿಂದ, ______ ನಡೆಯುತ್ತವೆ.
18. ಐವತ್ತು ವರ್ಷ ತುಂಬಿದ ಆರೋಗ್ಯವಂತ ಮರವೊಂದರ ಬೆಲೆ ______ ರೂಪಾಯಿಗಳಿಗಿಂತ ಹೆಚ್ಚು.
19. ಮರ ಹೀರಿಕೊಳ್ಳುವ ______ ದ ಬೆಲೆ ಐದು ಲಕ್ಷ ರೂಪಾಯಿ.
20. ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಹೆಚ್ಚಿ ______ ತಡೆಯುವುದರ ಬೆಲೆ ಮೂರು ಲಕ್ಷ.
ಭಾಗ-ಸಿ: ಬಹು ಆಯ್ಕೆ ಪ್ರಶ್ನೆಗಳು (MCQs)
21. ಮರಗಳನ್ನು ಕೊಲ್ಲುವ ರಾಸಾಯನಿಕಕ್ಕೆ ಏನೆಂದು ಕರೆಯುತ್ತಾರೆ?
22. ಪಾಲ್ ಕೆಲೆನ್ ಯಾವ ದೇಶದ ಪ್ರಜೆ?
23. ಪಾಲ್ ಕೆಲೆನ್ನಿಗೆ ವಿಧಿಸಿದ ದಂಡದ ಮೊತ್ತ ಎಷ್ಟು?
24. ಭಾರತದಲ್ಲಿ ಮರ ಕಡಿಯುವುದು ಸಾಮಾನ್ಯ ವಿಚಾರ ಏಕೆ?
25. ಮಣ್ಣಿನ ಸವೆತ ತಡೆಯುವುದರಿಂದ ಮರಕ್ಕೆ ಎಷ್ಟು ಬೆಲೆ ಇದೆ ಎಂದು ವಿಜ್ಞಾನಿ ಹೇಳಿದ್ದಾರೆ?
26. ಡಾ. ಹಾ. ಮಾ. ನಾಯಕರು ಯಾವ ಜಿಲ್ಲೆಯಲ್ಲಿ ಜನಿಸಿದರು?
27. ಡಾ. ಹಾ. ಮಾ. ನಾಯಕರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?
28. ಅಂತರ್ಜಲ ಎಂದರೆ ಏನು?
29. ಈ ಪಾಠವನ್ನು ಡಾ. ಹಾ. ಮಾ. ನಾಯಕರ ಯಾವ ಕೃತಿಯಿಂದ ಆಯ್ದುಕೊಳ್ಳಲಾಗಿದೆ?
30. ಒಂದು ಮರವು ಪಶುಪಕ್ಷಿಗಳಿಗೆ ಆಶ್ರಯ ನೀಡುವುದರಿಂದ ಎಷ್ಟು ಬೆಲೆ ಹೊಂದಿದೆ?
ಭಾಗ-ಡಿ: ವಿರುದ್ಧಾರ್ಥಕ ಪದಗಳನ್ನು ಬರೆಯಿರಿ (Opposite Words)
31. ರಕ್ಷಿಸು
32. ಸಾಮಾನ್ಯ
33. ಬಹಿರಂಗ
34. ಸಾಧ್ಯ
35. ಆರೋಗ್ಯ
36. ಉಳಿಸು
37. ಆಸಕ್ತಿ
38. ಹೆಚ್ಚು
39. ಶುಭ
40. ಭವಿಷ್ಯ
ಭಾಗ-ಇ: ಸಮಾನಾರ್ಥಕ ಪದಗಳನ್ನು ಬರೆಯಿರಿ (Synonyms)
41. ಮರ
42. ಸಜೆ
43. ದೇಣಿಗೆ
44. ಭೂಮಿ
45. ದೂರು
ಭಾಗ-ಎಫ್: ತತ್ಸಮ-ತದ್ಭವ ರೂಪಗಳನ್ನು ಬರೆಯಿರಿ (Tatsama-Tadbhava Forms)
46. ವರ್ಷ (ತತ್ಸಮ)
47. ದೃಷ್ಟಿ (ತತ್ಸಮ)
48. ಆಶ್ಚರ್ಯ (ತತ್ಸಮ)
49. ಜಾಮೀನು (ತದ್ಭವ)
ಭಾಗ-ಜಿ: ಲಿಂಗ ಬದಲಾಯಿಸಿರಿ (Change the Gender)
50. ಕವಿ (ಪುಲ್ಲಿಂಗ)
51. ತಂದೆ (ಪುಲ್ಲಿಂಗ)
52. ಅರಸಿ (ಸ್ತ್ರೀಲಿಂಗ)
53. ಸಚಿವೆ (ಸ್ತ್ರೀಲಿಂಗ)
ಭಾಗ-ಹೆಚ್: ಬಿಡಿಸಿ ಬರೆಯಿರಿ (Split the words – ಸಂಧಿ)
54. ಪತ್ರಗಳನ್ನಿಡು = ______ + ______
55. ಸಾವಿರಾರು = ______ + ______
56. ಶುಭಾಶಯ = ______ + ______
57. ಮರವೊಂದು = ______ + ______
ಭಾಗ-ಐ: ೨-೩ ವಾಕ್ಯಗಳಲ್ಲಿ ಉತ್ತರಿಸಿರಿ (Answer in 2-3 sentences)
58. ಮರ ಕಡಿಯುವವರು ಯಾವ ರೀತಿ ಉಪಾಯದಿಂದ ಮರಗಳನ್ನು ಸಾಯಿಸುತ್ತಾರೆ?
59. ಮರವನ್ನು ಉಳಿಸಲು ಅಮೆರಿಕಾದ ವೃಕ್ಷಪ್ರೇಮಿಗಳು ಏನೆಲ್ಲಾ ಮಾಡಿದರು?
60. ಆರೋಗ್ಯವಂತ ಮರವು ನೀರು ಭೂಮಿಯಲ್ಲಿ ಇಂಗಲು ಹೇಗೆ ಸಹಾಯ ಮಾಡುತ್ತದೆ?




