ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ
ತರಗತಿ -೮ • ವಿಷಯ – ಕನ್ನಡ (SL)
• ಪದ್ಯ ೬. ಮಳೆ ಬರಲಿ
MODEL QUESTION BANK OF LESSON BASED ASSESSMENT
(These Questions are only for model)
Lesson Based Assessment
Class – 8
Sub. – Kannada (Second Language)
ಪದ್ಯ ೬. ಮಳೆ ಬರಲಿ
2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸುವ ಸಂಬಂಧ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸಾಧಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಲಾಗಿದೆ. ಸದರಿ ಸಾಮಗ್ರಿಯನ್ನು ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸುವುದು ಅತ್ಯವಶ್ಯಕವಾಗಿದೆ.
1. ಪಾಠ ಆಧಾರಿತ ಮೌಲ್ಯಾಂಕನದ (LBA) ಉದ್ದೇಶಗಳು:
ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಿಕೊಳ್ಳುವುದು.
ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವುದು.
ಮಕ್ಕಳ ಪ್ರಗತಿಯನ್ನು ಗುರುತಿಸುವಲ್ಲಿ ಪರೀಕ್ಷಾ ಅವಲಂಬನೆಯನ್ನು ಕಡಿಮೆ ಮಾಡಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.
ನಿರಂತರ ವಿಶ್ಲೇಷಣೆಯಿಂದ ನಿಗದಿತ ಕಲಿಕಾ ಫಲಗಳ ಗಳಿಕೆಗೆ ಅವಕಾಶ ನೀಡುವುದು.
ವಿವಿಧ ಕಲಿಕಾ ಹಂತದ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ Inclusive Assessment ಗೆ ಪ್ರೇರಣೆ ನೀಡುವುದು.
ಶಿಕ್ಷಕರ ಮೌಲ್ಯಮಾಪನ ಸಾಮರ್ಥ್ಯವನ್ನು ಹೆಚ್ಚಿಸುವುದು. (ಮೌಖಿಕ, ಪ್ರಾಯೋಗಿಕ, ಸಹವರ್ತಿ ಮೌಲ್ಯಮಾಪನ ಯೋಜನೆಗಳು, Portfolio, ಸ್ವ-ಮೌಲ್ಯಮಾಪನ ಇತ್ಯಾದಿ…)
ವಿದ್ಯಾರ್ಥಿಗಳ ಕಲಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು.
ಪ್ರತಿ ಹಂತದ ವಿದ್ಯಾರ್ಥಿಯ ಕಲಿಕೆಯನ್ನು ಪೋಷಕರ ಗಮನಕ್ಕೆ ತರುವುದು.
ಪಾಠ ಆಧಾರಿತ ಮೌಲ್ಯಾಂಕನ ಚೌಕಟ್ಟು, ಸಾಂಪ್ರದಾಯಿಕ ಪರೀಕ್ಷಾ ಕೇಂದ್ರಿತ ಮೌಲ್ಯಮಾಪನದಿಂದ ದೈನಂದಿನ ತರಗತಿ ಕಲಿಕಾ ಪ್ರಕ್ರಿಯೆಯೊಂದಿಗೆ ಸಂಯೋಜಿತವಾದ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ (CCE) ಪೂರಕವಾಗಿಸುವುದು.
ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ ತರಗತಿ -೮
ವಿಷಯ – ಕನ್ನಡ (SL) | ಪದ್ಯ – ೬. ಮಳೆ ಬರಲಿ
ಈ ಪ್ರಶ್ನೆಗಳು ಅಭ್ಯಾಸಕ್ಕಾಗಿ ಮಾತ್ರ
ಕಲಿಕಾ ಫಲಿತಾಂಶಗಳು (Learning Outcomes)
- ಮಳೆ ಬರಲಿ ಎಂದು ಕವಯಿತ್ರಿ ಪ್ರಾರ್ಥಿಸಿರುವ ಮುಖ್ಯ ಕಾರಣವನ್ನು ಸರಳವಾಗಿ ತಿಳಿಯುವುದು.
- ಪದ್ಯದಲ್ಲಿರುವ ಕಂಬಳಿ, ಕೊಳ್ಳ, ಛಾವಣಿ ಮುಂತಾದ ಸರಳ ಪದಗಳ ಅರ್ಥವನ್ನು ತಿಳಿದು ಬಳಸಲು ಸಾಧ್ಯವಾಗುವುದು.
- ಮಳೆಯಿಂದ ಪ್ರಕೃತಿಯ ಅಂಶಗಳಾದ ಬಯಲು, ಬೆಟ್ಟ, ಕೆರೆ-ಬಾವಿಗಳಿಗೆ ಆಗುವ ಪ್ರಯೋಜನಗಳನ್ನು ವಿವರಿಸುವುದು.
- ಅತಿವೃಷ್ಟಿ (ಹೆಚ್ಚು ಮಳೆ)ಯಿಂದ ರೈತರಿಗೆ ಮತ್ತು ಬಡವರಿಗೆ ಆಗುವ ನಷ್ಟಗಳ ಬಗ್ಗೆ ಅರಿತುಕೊಳ್ಳುವುದು.
- ಪದ್ಯದ ಸಾಲುಗಳನ್ನು ನೆನಪಿಸಿಕೊಂಡು ಸರಿಯಾಗಿ ಪೂರ್ಣಗೊಳಿಸುವುದು.
- ಪಾಠದ ಆಧಾರದ ಮೇಲೆ ವಿರುದ್ಧಾರ್ಥಕ ಪದಗಳು ಮತ್ತು ಪದಗಳನ್ನು ಬಿಡಿಸಿ ಬರೆಯುವ ವಿಧಾನವನ್ನು ಕಲಿಯುವುದು.
I. ಒಂದು ಪದ/ವಾಕ್ಯದಲ್ಲಿ ಉತ್ತರಿಸಿ (10)
II. ಬಿಟ್ಟ ಸ್ಥಳ ತುಂಬಿರಿ (10)
III. ಸರಿ ಉತ್ತರವನ್ನು ಆರಿಸಿ ಬರೆಯಿರಿ (10)
IV. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ (10)
V. ಪದ್ಯ ಭಾಗ ಪೂರ್ಣಗೊಳಿಸಿ (8)
ಆದರೆ
ಹಸಿರು ಹೊಲ _________ ಕಸಿದುಕೊಳ್ಳದಿರಲಿ.
ಕಸಿದುಕೊಳ್ಳದಿರಲಿ.
ಕೆಡವಿ ಹಾಕದಿರಲಿ.
ಕೆಡವಿ ಹಾಕದಿರಲಿ.
ಹೊದೆಯಲು _________ ಕಂಬಳಿ ಎಲ್ಲರಿಗೂ ಸಿಗಲಿ.
ಬೆಂದ _________ಗಳಿಗೆ ಬರಲಿ ಮಳೆ ಬರಲಿ.
ಬರಲಿ ಮಳೆ ಬರಲಿ.
_________ ನಗಲಿ ಏಳು ಬಣ್ಣಗಳಲ್ಲಿ.
VI. ವಿರುದ್ಧಾರ್ಥಕ ಪದಗಳು ಮತ್ತು ವ್ಯಾಕರಣ (12)
A. ವಿರುದ್ಧಾರ್ಥಕ ಪದಗಳು (6)
B. ಮಾದರಿಯಂತೆ ಬಿಡಿಸಿ ಬರೆಯಿರಿ (6)
ಇರಲೊಂದು =
ಮಾದರಿ ಉತ್ತರಗಳು (Model Answer Key)
I. ಒಂದು ಪದ/ವಾಕ್ಯದಲ್ಲಿ ಉತ್ತರಿಸಿ
- ಮೂಲಾಧಾರ.
- ಎಲ್ಲರಿಗೂ.
- ರೈತರ ಸುಖ ನಿದ್ದೆಗಳು.
- ಮಣ್ಣಿನ ಗೋಡೆಗಳಿಂದ.
- ಕುರಿಯ ತುಪ್ಪಳದಿಂದ.
- ಏಳು ಬಣ್ಣಗಳಲ್ಲಿ.
- ರೈತರ.
- ತಗ್ಗು ಅಥವಾ ಗುಣಿ.
- ಶ್ರೀಮತಿ ಸವಿತಾ ನಾಗಭೂಷಣ.
- ಕೆರೆ, ಬಾವಿ, ಹಳ್ಳ ಅಥವಾ ಕೊಳ್ಳ.
II. ಬಿಟ್ಟ ಸ್ಥಳ ತುಂಬಿರಿ
- ಮೂಲಾಧಾರ
- ವೈಪರೀತ್ಯಗಳು
- ಗದ್ದೆ
- ಛಾವಣಿ
- ಕಂಬಳಿ
- ನೆಮ್ಮದಿ
- ನೊಂದ
- ನೆಲ
- ಏಳು
- ಕವನ ಸಂಕಲನ
III. ಸರಿ ಉತ್ತರವನ್ನು ಆರಿಸಿ ಬರೆಯಿರಿ (MCQs)
- a) ಹೆಚ್ಚು ಮಳೆ ಬರುವುದು
- b) ಅತಿವೃಷ್ಟಿ ಹಾಗೂ ಅನಾವೃಷ್ಟಿ
- b) ಮಳೆ ಸಕಾಲಕ್ಕೆ ಹಿತವಾಗಿ ಬಂದಾಗ
- c) ಬೆಂದ ಬೆಟ್ಟಗಳಿಗೆ
- c) ಮಾಳಿಗೆ (ಚಾವಣಿ)
- b) ಸುಡು, ಕುದಿ, ಬಿಸಿ
- c) ನಾ ಬರುತೇನ ಕೇಳ
- b) ಮಳೆ ಇಲ್ಲದಿರುವುದು
- c) ಅಂಚೆ ಇಲಾಖೆ
- b) ದೂರವಾಗಲಿ
IV. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ
- ಮಳೆ ಹೆಚ್ಚು ಬಂದು ಹಸಿರು ಹೊಲ-ಗದ್ದೆಗಳನ್ನು ಮತ್ತು ರೈತರ ಸುಖ ನಿದ್ದೆಗಳನ್ನು ಕಸಿದುಕೊಳ್ಳದಿರಲಿ. ಹಾಗೆಯೇ, ಬಡವರ ಹುಲ್ಲಿನ ಛಾವಣಿ ಮತ್ತು ಮಣ್ಣಿನ ಗೋಡೆಗಳನ್ನು ಕೆಡವಿ ಹಾಕದಿರಲಿ ಎಂದು ಕವಯಿತ್ರಿ ಆಶಿಸಿದ್ದಾರೆ.
- ದೀರ್ಘಕಾಲ ಮಳೆ ಬಾರದೆ ಹೋದಾಗ, ಅಥವಾ ಅನಾವೃಷ್ಟಿ ಉಂಟಾದಾಗ ಕೆರೆ, ಬಾವಿ, ಹಳ್ಳಗಳು ಬತ್ತಿ ಹೋಗುತ್ತವೆ. ಈ ಸಮಯದಲ್ಲಿ ಅವುಗಳಿಗೆ ನೀರಿಲ್ಲದೆ ಬಾಯಾರಿಕೆ ಆಗುತ್ತದೆ.
- ಮಳೆ ಬಾರದೆ ಬಯಲುಗಳು ಒಣಗಿ ನೋಂದಿರುತ್ತವೆ ಮತ್ತು ಬೆಟ್ಟಗಳು ಬಿಸಿಲಿಗೆ ಸುಟ್ಟು ಬೆಂದಿರುತ್ತವೆ. ಮಳೆ ‘ಧೋ’ ಎಂದು ಸುರಿದಾಗ ಇವುಗಳಿಗೆ ನೀರು ಸಿಕ್ಕು, ಅವು ತಂಪಾಗಿ ಹಸಿರಾಗುತ್ತವೆ.
- ಎಲ್ಲರಿಗೂ ಇರಲು ಒಂದು ಪುಟ್ಟ ಮನೆ ಮತ್ತು ಹೊದೆಯಲು ಬೆಚ್ಚನೆಯ ಕಂಬಳಿ ಸಿಗಲಿ. ಮಳೆಯು ನಮ್ಮೆಲ್ಲರ ಕಷ್ಟಗಳನ್ನು ದೂರಮಾಡಿ, ಸುಖ ಸಂತೋಷವನ್ನು ಹೆಚ್ಚಿಸಲಿ ಎಂದು ಕವಯಿತ್ರಿ ಆಶಿಸುತ್ತಾರೆ.
- ಬಡವರ ಮತ್ತು ಸಾಮಾನ್ಯ ಜನರ ಮನೆಗಳಿಗೆ ಹೆಚ್ಚು ಹಾನಿ ಉಂಟಾಗುತ್ತದೆ. ಏಕೆಂದರೆ ಅವರ ಮನೆಗಳು ಸಾಮಾನ್ಯವಾಗಿ ಹುಲ್ಲಿನ ಛಾವಣಿ ಮತ್ತು ಮಣ್ಣಿನ ಗೋಡೆಗಳಿಂದ ಕಟ್ಟಲ್ಪಟ್ಟಿರುತ್ತವೆ.
- ಇದರ ಅರ್ಥ ಮಳೆಯು ಅತಿಯಾಗಿ ಬಂದು, ರೈತರು ಬೆಳೆದ ಫಸಲನ್ನು ಮತ್ತು ಗದ್ದೆಗಳನ್ನು ನಾಶ ಮಾಡದಿರಲಿ. ಇದರಿಂದ ರೈತರು ನೆಮ್ಮದಿಯಾಗಿ, ಕಷ್ಟವಿಲ್ಲದೆ ನಿದ್ದೆ ಮಾಡಲಿ ಎಂದು ಕವಯಿತ್ರಿ ಆಶಿಸಿದ್ದಾರೆ.
- ಮಳೆಯು ನೊಂದ ಬಯಲುಗಳಿಗೆ, ಬೆಂದ ಬೆಟ್ಟಗಳಿಗೆ, ಹಾಗೂ ಬಾಯಾರಿದ ಕೆರೆ, ಬಾವಿ, ಹಳ್ಳ, ಕೊಳ್ಳಗಳಿಗೆ ಬರಲಿ ಎಂದು ಕವಯಿತ್ರಿ ಪ್ರಾರ್ಥಿಸಿದ್ದಾರೆ.
- ಮಳೆ ‘ಧೋ’ ಎಂದು ಸುರಿದು ನಿಂತಾಗ, ನೆಲವು ತಂಪಾಗಿ ಮತ್ತು ಮುಗಿಲು ಸ್ವಚ್ಛವಾಗಿ ಕಾಣುತ್ತದೆ. ಆಗ ನೆಲ ಮತ್ತು ಮುಗಿಲು ಏಳು ಬಣ್ಣಗಳಲ್ಲಿ (ಇಂದ್ರಧನುಷ್ಯದ ಮೂಲಕ) ನಗಲಿ ಎಂದು ಕವಯಿತ್ರಿ ಆಶಿಸುತ್ತಾರೆ.
- ಕವಯಿತ್ರಿ ಎಲ್ಲರೂ ಚಳಿಯಲ್ಲಿ ಬೆಚ್ಚಗೆ ಇರಲು ಕಂಬಳಿ ಸಿಗಲಿ ಎಂದು ಹಾರೈಸಿದ್ದಾರೆ. ಇದರ ಮೂಲಕ, ಬಡವರಿಗೆ ಅಗತ್ಯವಾದ ಸೌಕರ್ಯಗಳು ಮತ್ತು ಸುಖ ಜೀವನ ಸಿಗಲಿ ಎಂಬ ವಿಶಾಲ ಅರ್ಥವನ್ನು ವ್ಯಕ್ತಪಡಿಸಿದ್ದಾರೆ.
- ಮಳೆಯು ಸಕಾಲಕ್ಕೆ, ಹಿತವಾಗಿ ಬರಲಿ ಎಂದು ಪ್ರಾರ್ಥಿಸಿದ್ದಾರೆ. ಹಿತವಾದ ಮಳೆಯಿಂದ ಕೆರೆ ಕಟ್ಟೆಗಳು ತುಂಬಿ, ರೈತರ ಬದುಕು ಸುಖ-ನೆಮ್ಮದಿಯಿಂದ ಹಸನಾಗುತ್ತದೆ.
V. ಪದ್ಯ ಭಾಗ ಪೂರ್ಣಗೊಳಿಸಿ
- ಗದ್ದೆಗಳನ್ನೂ
- ಸುಖ ನಿದ್ದೆ
- ಛಾವಣಿಗಳನ್ನೂ
- ಗೋಡೆಗಳನ್ನೂ
- ಬೆಚ್ಚನೆಯ
- ಬೆಟ್ಟ
- ಕೆರೆ ಬಾವಿ
- ನೆಲ-ಮುಗಿಲು
VI. ವಿರುದ್ಧಾರ್ಥಕ ಪದಗಳು ಮತ್ತು ವ್ಯಾಕರಣ
A. ವಿರುದ್ಧಾರ್ಥಕ ಪದಗಳು:
- ಕೆಳಗೆ
- ದುಃಖ/ಕಷ್ಟ
- ಒಣಗಿದ/ಕಂದು
- ಹೋಗಲಿ
- ಅಳು
- ದೊಡ್ಡ
B. ಮಾದರಿಯಂತೆ ಬಿಡಿಸಿ ಬರೆಯಿರಿ:
- ಇರಲು + ಒಂದು
- ಬಾಯಾರು + ಇದ
- ಕೊಳ್ಳದೆ + ಇರಲಿ
- ಸಮಾನಾರ್ಥಕ ಜೋಡುನುಡಿ.
- ಅನುಕರಣಾವ್ಯಯ (ಧ್ವನಿ ಸೂಚಿಸುವ ಪದ).
- ಕಸಿದುಕೊಳ್ಳು (ಕ್ರಿಯಾಪದ ರೂಪ).




