LBA 8th KANNADA (SL) ಪಾಠ -೬. ಪರಿವರ್ತನೆ

ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ
ತರಗತಿ -೮ • ವಿಷಯ – ಕನ್ನಡ (SL)

MODEL QUESTION BANK OF LESSON BASED ASSESSMENT

Lesson Based Assessment 

Class – 8

Sub. – Kannada (Second Language)

ಪಾಠ – ೬. ಪರಿವರ್ತನೆ

        2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸುವ ಸಂಬಂಧ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸಾಧಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಲಾಗಿದೆ. ಸದರಿ ಸಾಮಗ್ರಿಯನ್ನು ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸುವುದು ಅತ್ಯವಶ್ಯಕವಾಗಿದೆ.

1. ಪಾಠ ಆಧಾರಿತ ಮೌಲ್ಯಾಂಕನದ (LBA) ಉದ್ದೇಶಗಳು:

    ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಿಕೊಳ್ಳುವುದು.

    ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವುದು.

    ಮಕ್ಕಳ ಪ್ರಗತಿಯನ್ನು ಗುರುತಿಸುವಲ್ಲಿ ಪರೀಕ್ಷಾ ಅವಲಂಬನೆಯನ್ನು ಕಡಿಮೆ ಮಾಡಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.

    ನಿರಂತರ ವಿಶ್ಲೇಷಣೆಯಿಂದ ನಿಗದಿತ ಕಲಿಕಾ ಫಲಗಳ ಗಳಿಕೆಗೆ ಅವಕಾಶ ನೀಡುವುದು.

    ವಿವಿಧ ಕಲಿಕಾ ಹಂತದ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ Inclusive Assessment ಗೆ ಪ್ರೇರಣೆ ನೀಡುವುದು.

    ಶಿಕ್ಷಕರ ಮೌಲ್ಯಮಾಪನ ಸಾಮರ್ಥ್ಯವನ್ನು ಹೆಚ್ಚಿಸುವುದು. (ಮೌಖಿಕ, ಪ್ರಾಯೋಗಿಕ, ಸಹವರ್ತಿ ಮೌಲ್ಯಮಾಪನ ಯೋಜನೆಗಳು, Portfolio, ಸ್ವ-ಮೌಲ್ಯಮಾಪನ ಇತ್ಯಾದಿ…)

    ವಿದ್ಯಾರ್ಥಿಗಳ ಕಲಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು.

ಪ್ರತಿ ಹಂತದ ವಿದ್ಯಾರ್ಥಿಯ ಕಲಿಕೆಯನ್ನು ಪೋಷಕರ ಗಮನಕ್ಕೆ ತರುವುದು.

    ಪಾಠ ಆಧಾರಿತ ಮೌಲ್ಯಾಂಕನ ಚೌಕಟ್ಟು, ಸಾಂಪ್ರದಾಯಿಕ ಪರೀಕ್ಷಾ ಕೇಂದ್ರಿತ ಮೌಲ್ಯಮಾಪನದಿಂದ ದೈನಂದಿನ ತರಗತಿ ಕಲಿಕಾ ಪ್ರಕ್ರಿಯೆಯೊಂದಿಗೆ ಸಂಯೋಜಿತವಾದ    ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ (CCE) ಪೂರಕವಾಗಿಸುವುದು.

ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ

ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ

ತರಗತಿ – ೮ | ವಿಷಯ – ಕನ್ನಡ (SL) | ಪಾಠ – ೬. ಪರಿವರ್ತನೆ

ಜಿ. ಎಸ್. ಬಸವರಾಜಶಾಸ್ತ್ರಿ

ಕಲಿಕಾ ಫಲಗಳು (Learning Outcomes)

  • ೧. ಪರಿವರ್ತನೆಯ ಮನೋಭಾವ: ಸಂದರ್ಭಕ್ಕನುಗುಣವಾಗಿ ಬದಲಾಗುವ ಗುಣದ ಮಹತ್ವವನ್ನು ತಿಳಿಯುವುದು.
  • ೨. ಸಜ್ಜನರ ಸಹವಾಸ: ಒಳ್ಳೆಯವರ ಒಡನಾಟದಿಂದಾಗುವ ಪ್ರಯೋಜನಗಳನ್ನು ಅರಿತುಕೊಳ್ಳುವುದು.
  • ೩. ಪಾತ್ರಗಳ ಗುರುತು: ಕಥೆಯಲ್ಲಿ ಬರುವ ಗಣೇಕಲ್ ಶಿವಯ್ಯ ಮತ್ತು ಪಂಡಿತ ತಾರಾನಾಥರಂತಹ ಪಾತ್ರಗಳ ವಿಶೇಷ ಗುಣಗಳನ್ನು ಗುರುತಿಸುವುದು.
  • ೪. ಧೈರ್ಯ ಮತ್ತು ಕ್ಷಮೆ: ಕಷ್ಟದ ಸಮಯದಲ್ಲಿ ಧೈರ್ಯದಿಂದ ಇರುವುದು ಹಾಗೂ ತಪ್ಪು ಮಾಡಿದವರನ್ನು ಕ್ಷಮಿಸುವ ಗುಣವನ್ನು ರೂಢಿಸಿಕೊಳ್ಳುವುದು.
  • ೫. ಶಬ್ದ ಸಂಪತ್ತು: ಪಾಠದಲ್ಲಿರುವ ಹೊಸ ಪದಗಳ ಅರ್ಥ ಮತ್ತು ವ್ಯಾಕರಣಾಂಶಗಳನ್ನು ತಿಳಿದು ಭಾಷಾ ಜ್ಞಾನ ಹೆಚ್ಚಿಸಿಕೊಳ್ಳುವುದು.
  • ೬. ಸನ್ಮಾರ್ಗ ದರ್ಶನ: ದುಶ್ಚಟಗಳನ್ನು ಬಿಟ್ಟು ಒಳ್ಳೆಯ ದಾರಿಯಲ್ಲಿ ಬದುಕುವ ಪ್ರೇರಣೆ ಪಡೆಯುವುದು.

ಭಾಗ-೧: ಬಿಟ್ಟ ಸ್ಥಳಗಳನ್ನು ತುಂಬಿರಿ (10 ಪ್ರಶ್ನೆಗಳು)

೧. ಹುಟ್ಟುತ್ತಲೇ ಯಾರೂ ______________ ಆಗಿರುವುದಿಲ್ಲ.

ಕೆಟ್ಟವರು

೨. ಪರಿಶುದ್ಧ ಮನಸ್ಸಿನ ವ್ಯಕ್ತಿಯ ಒಡನಾಟ ಯಾವಾಗಲೂ ______________ ತರುತ್ತದೆ.

ಸಂತೋಷ

೩. ಸಜ್ಜನರ ಸಹವಾಸ ಹೆಚ್ಚೇನು ______________ ಸವಿದಂತೆ.

ಸವಿ

೪. ಗಣೇಕಲ್ ಶಿವಯ್ಯ ತಾತನು ಬಯಲಾಟದ ______________ ಆಗಿದ್ದನು.

ನಿರ್ದೇಶಕ

೫. ಕಳ್ಳರು ಗಂಟು ಬಿದ್ದ ಜಾಗ ______________ ಬನವಾಗಿತ್ತು.

ಈಚಲ

೬. ತಾತನ ಹಾಡಿಗೆ ಮೈಮರೆತ ಕಳ್ಳರು ಕಣ್ಣು ಮುಚ್ಚಿಕೊಂಡು ______________ ಕುಳಿತುಕೊಂಡರು.

ತಲೆದೂಗುತ್ತಾ

೭. ಪಂಡಿತ ತಾರಾನಾಥರು ______________ ಜಿಲ್ಲೆಗೆ ಸೇರಿದವರು.

ರಾಯಚೂರು

೮. ತಾರಾನಾಥರಿಗೆ ವಿದೇಶೀಯರು ಉತ್ತಮವಾದ ______________ ಬಹುಮಾನವಾಗಿ ಕೊಟ್ಟಿದ್ದರು.

ವಾಚ್‌ನ್ನು

೯. ಕಳ್ಳತನ ಮಾಡಿದ ಬಾಲಕನು ಕೊನೆಗೆ ______________ ಜೀವನ ನಡೆಸುತ್ತಾನೆ.

ಉತ್ತಮ/ಸುಖ

೧೦. ‘ಪರಿವರ್ತನೆ’ ಪಾಠವನ್ನು ಜಿ.ಎಸ್. ಬಸವರಾಜಶಾಸ್ತ್ರೀ ಅವರ ______________ ಕೃತಿಯಿಂದ ಆಯ್ದುಕೊಳ್ಳಲಾಗಿದೆ.

ಶಾಸ್ತ್ರಿ ಕನಸು

ಭಾಗ-೨: ಸರಿಯಾದ ಉತ್ತರ ಆರಿಸಿ ಬರೆಯಿರಿ (MCQs) (10 ಪ್ರಶ್ನೆಗಳು)

೧೧. ಹುಟ್ಟಿದ ಮನುಷ್ಯನನ್ನು ಕೆಟ್ಟವನನ್ನಾಗಿ ಮಾಡುವುದು ಯಾವುದು?

c) ಸಂದರ್ಭಗಳು

೧೨. ಗಣೇಕಲ್ ಶಿವಯ್ಯ ತಾತ ಯಾವುದನ್ನು ಬಾರಿಸುತ್ತಾ ಹಾಡಿದರು?

b) ಪಿಟೀಲು

೧೩. ತಾತನ ಸಂಗೀತ ಕೇಳಲು ಕಳ್ಳರು ಎಷ್ಟು ಸಮಯ ಒಪ್ಪಿಕೊಂಡರು?

b) ಅರ್ಧ ತಾಸು

೧೪. ಸಂಗೀತ ಕೇಳಿದ ನಂತರ ಕಳ್ಳರು ತಾತನಿಗೆ ಏನು ಹೇಳಿದರು?

b) ನಿಮ್ಮ ಆಶೀರ್ವಾದ ಮಾತ್ರ ಸಾಕು

೧೫. ತಾರಾನಾಥರನ್ನು ಏನೆಂದು ಕರೆಯುತ್ತಿದ್ದರು?

b) ಬಡವರ ಬಂಧು

೧೬. ತಾರಾನಾಥರು ಆಶ್ರಮವನ್ನು ಏಕೆ ಕಟ್ಟಿದರು?

b) ಬಡಮಕ್ಕಳಿಗೆ ವಿದ್ಯೆ ಕಲಿಸಲು

೧೭. ತಾರಾನಾಥರ ವಾಚನ್ನು ಕದ್ದು ಮಾರಿದವನು ಯಾರು?

c) ಆಶ್ರಮದ ಬಾಲಕ

೧೮. ಪೊಲೀಸರು ಬಾಲಕನನ್ನು ಹಿಡಿಯಲು ಬಂದಾಗ ತಾರಾನಾಥರು ಏನು ಹೇಳಿದರು?

b) ವಾಚ್ ರಿಪೇರಿಗೆ ಕೊಟ್ಟಿದ್ದೆ, ಇವನು ಕಳ್ಳನಲ್ಲ

೧೯. ತಾರಾನಾಥರ ಗುಣಗಳನ್ನು ನಾವೆಲ್ಲರೂ ______________ ಕವಿಯ ಆಸೆಯಾಗಿದೆ.

b) ಅಳವಡಿಸಿಕೊಳ್ಳಬೇಕು

೨೦. ಕೃತಿಕಾರ ಜಿ.ಎಸ್. ಬಸವರಾಜಶಾಸ್ತ್ರೀ ಅವರು ಯಾವ ಭಾಷೆಗಳಲ್ಲಿ ಪ್ರವೀಣರಾಗಿದ್ದಾರೆ?

a) ಕನ್ನಡ, ಸಂಸ್ಕೃತ, ಹಿಂದಿ

ಭಾಗ-೩: ಒಂದು ಪದ/ವಾಕ್ಯದಲ್ಲಿ ಉತ್ತರಿಸಿ (10 ಪ್ರಶ್ನೆಗಳು)

೨೧. ಮನಸ್ಸಿಗೆ ಹಿತಕರವಾದ ಮಾತುಗಳು ಯಾರ ಮನಸ್ಸನ್ನು ಪರಿವರ್ತಿಸುತ್ತವೆ?

ದುಷ್ಟನ ಮನಸ್ಸನ್ನು.

೨೨. ಗಣೇಕಲ್ ಶಿವಯ್ಯ ತಾತನು ಯಾವ ವಾದ್ಯವನ್ನು ಬಾರಿಸುವವನು?

ಪಿಟೀಲು.

೨೩. ಗಣೇಕಲ್ ಶಿವಯ್ಯ ತಾತನಿಗೆ ಎಷ್ಟು ಜನ ಕಳ್ಳರು ಗಂಟು ಬಿದ್ದರು?

ನಾಲ್ಕು ಜನ.

೨೪. ಕಳ್ಳರು ಸಂಗೀತ ಕೇಳಿ ಯಾವುದಕ್ಕೆ ಮೈಮರೆತರು?

ತಾತನ ಹಾಡಿಗೆ.

೨೫. ‘ಪರಿವರ್ತನೆ’ ಪದದ ಅರ್ಥವೇನು?

ಬದಲಾವಣೆ.

೨೬. ಬಡವರ ಉದ್ಧಾರಕ್ಕಾಗಿ ಯಾರು ದುಡಿದರು?

ಪಂಡಿತ ತಾರಾನಾಥರು.

೨೭. ಬಾಲಕನು ಕದ್ದ ವಾಚನ್ನು ಯಾರಿಗೆ ಮಾರಿದ್ದನು?

ವ್ಯಾಪಾರಿಗೆ.

೨೮. ತಾರಾನಾಥರ ಸಹೋದರ ಏನು ಮಾಡಿದರು?

ಪೊಲೀಸರಿಗೆ ದೂರು ನೀಡಿದರು.

೨೯. ‘ಪಶ್ಚಾತ್ತಾಪ’ ಎಂದರೆ ಏನು?

ತಪ್ಪು ಮಾಡಿದ ಕೆಲಸಕ್ಕೆ ಮರುಗುವಿಕೆ.

೩೦. ಬಾಲಕನು ನೌಕರಿ ಹಿಡಿದ ನಂತರ ವಾಚನ್ನು ಏನು ಮಾಡುತ್ತಿದ್ದನು?

ದೇವರ ಮುಂದೆ ಇಟ್ಟು ಪೂಜಿಸುತ್ತಿದ್ದನು.

ಭಾಗ-೪: ವಿರುದ್ಧಾರ್ಥಕ ಪದಗಳು (Opposite Words) (10 ಪ್ರಶ್ನೆಗಳು)

೩೧. ಕೆಟ್ಟವರು X

ಒಳ್ಳೆಯವರು

೩೨. ಸಂತೋಷ X

ದುಃಖ/ವ್ಯಸನ

೩೩. ನಿಶ್ಚಿಂತೆ X

ಚಿಂತೆ

೩೪. ಸನ್ಮಾರ್ಗ X

ದುರ್ಮಾರ್ಗ/ಕೆಟ್ಟ ದಾರಿ

೩೫. ಅಸಾಧ್ಯ X

ಸಾಧ್ಯ

೩೬. ಧೈರ್ಯ X

ಅಧೈರ್ಯ/ಭಯ

೩೭. ವಿದೇಶಿ X

ಸ್ವದೇಶಿ

೩೮. ಸುಳ್ಳು X

ಸತ್ಯ

೩೯. ಕಷ್ಟ X

ಸುಖ

೪೦. ಶಿಕ್ಷೆ X

ಕ್ಷಮೆ/ಬಹುಮಾನ

ಭಾಗ-೫: ವ್ಯಾಕರಣಾಂಶಗಳು (20 ಪ್ರಶ್ನೆಗಳು)

ಅ. ವಚನ ಬದಲಾಯಿಸಿ ಬರೆಯಿರಿ (5 ಪ್ರಶ್ನೆಗಳು)

೪೧. ಕಳ್ಳ (ಬಹುವಚನ)

ಕಳ್ಳರು

೪೨. ಮರ (ಬಹುವಚನ)

ಮರಗಳು

೪೩. ಮಕ್ಕಳು (ಏಕವಚನ)

ಮಗು

೪೪. ಹಾಡು (ಬಹುವಚನ)

ಹಾಡುಗಳು

೪೫. ಬಾಲಕರು (ಏಕವಚನ)

ಬಾಲಕ

ಆ. ಈ ಪದಗಳನ್ನು ಬಿಡಿಸಿ ಬರೆಯಿರಿ (5 ಪ್ರಶ್ನೆಗಳು)

೪೬. ಪರೋಪಕಾರಿ

ಪರ + ಉಪಕಾರಿ

೪೭. ಸಹೋದರ

ಸಹ + ಉದರ

೪೮. ಒಟ್ಟುಗೂಡಿ

ಒಟ್ಟು + ಕೂಡಿ

೪೯. ಸನ್ಮಾರ್ಗ

ಸತ್ + ಮಾರ್ಗ

೫೦. ಜಗದ್ಗುರು

ಜಗತ್ + ಗುರು

ಇ. ‘ವಂತ’ ಪ್ರತ್ಯಯ ಸೇರಿರುವ ಪದಗಳನ್ನು ಬರೆಯಿರಿ (5 ಪ್ರಶ್ನೆಗಳು)

೫೧. ಧೈರ್ಯ

ಧೈರ್ಯವಂತ

೫೨. ಬುದ್ಧಿ

ಬುದ್ಧಿವಂತ

೫೩. ಭಾಗ್ಯ

ಭಾಗ್ಯವಂತ

೫೪. ಶಕ್ತಿ

ಶಕ್ತಿವಂತ

೫೫. ಗುಣ

ಗುಣವಂತ

ಈ. ನುಡಿಗಟ್ಟುಗಳ ಅರ್ಥ ಬರೆಯಿರಿ (5 ಪ್ರಶ್ನೆಗಳು)

೫೬. ಗಂಟುಬೀಳು

ಬೆನ್ನುಹತ್ತು/ಹಠ ಹಿಡಿಯು

೫೭. ಮೈಮರೆ

ತಲ್ಲೀನರಾಗು/ಮರೆತುಹೋಗು

೫೮. ತಲೆದೂಗು

ಮೆಚ್ಚುಗೆ ಸೂಚಿಸು

೫೯. ಸಂಭಾವನೆ

ಗೌರವಧನ

೬೦. ತಕರಾರು

ಆಕ್ಷೇಪಣೆ

ಇದು ಮಾದರಿ ಪ್ರಶ್ನಕೋಠಿ ಮಾತ್ರ. ಹೆಚ್ಚಿನ ಅಧ್ಯಯನಕ್ಕಾಗಿ ಪಠ್ಯಪುಸ್ತಕವನ್ನು ಬಳಸಿ.

Join WhatsApp Channel Join Now
Telegram Group Join Now