Online application should be submitted following the instructions given on the website.
Online application should be submitted within the prescribed period.
Availability of online application – 17-01-2023
Last date for submission of online application – 26-02-2023
Common Entrance Test Date – 05-03-2023
ಪ್ರವೇಶಾತಿ ಹಂತಗಳು
ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವುದಕ್ಕೆ ಮೊದಲು ಅಭ್ಯರ್ಥಿಗಳು ವಿವರಣಾ ಪುಸ್ತಕದಲ್ಲಿರುವ ಸೂಚನೆಗಳನ್ನು ಜಾಗರೂಕತೆಯಿಂದ ಓದಬೇಕು.
ಬಿ.ಇಡಿ. ಶೈಕ್ಷಣಿಕ ಕಾರ್ಯಕ್ರಮಕ್ಕೆ ಪ್ರವೇಶಾತಿ ಅರ್ಜಿಯನ್ನು ಈ ಕೆಳಗಿನ ಯಾವುದಾದರೂ ಒಂದು ಮಾರ್ಗದ ಮುಖಾಂತರ ಪಡೆದುಕೊಳ್ಳಬಹುದು.
• ಅಭ್ಯರ್ಥಿಯು ಕರಾಮುವಿಯ ಜಾಲತಾಣ www.ksoumysuru.ac.in ಗೆ ಭೇಟಿ ನೀಡಿ ಪ್ರವೇಶಾತಿ ಪೋರ್ಟಲ್ ಮೇಲೆ ಕ್ಲಿಕ್ ಮಾಡುವುದು.
• ಅಭ್ಯರ್ಥಿಯು ಸ್ಕ್ಯಾನ್ ಮಾಡಿದ ಸ್ವ-ದೃಢೀಕೃತ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು.
• ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷಾ ಶುಲ್ಕ ರೂ. 1500/- ಆನ್‌ಲೈನ್ ಮೂಲಕ ಪಾವತಿ ಮಾಡಬೇಕು.
• ಅಭ್ಯರ್ಥಿಗಳು ಪ್ರವೇಶಾತಿ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
. ಅಭ್ಯರ್ಥಿಗಳಿಗೆ ಮುಖ್ಯ ಸೂಚನೆಗಳು
• ಆನ್-ಲೈನ್ ಅರ್ಜಿಯನ್ನು ಭರ್ತಿ ಮಾಡುವುದಕ್ಕೆ ಮೊದಲು ವಿದ್ಯಾರ್ಥಿಗಳು ವಿವರಣಾ ಪುಸ್ತಕದಲ್ಲಿರುವ ಸೂಚನೆಗಳನ್ನು ಜಾಗರೂಕತೆಯಿಂದ ಓದಬೇಕು ಮತ್ತು ಯಾವುದೇ ತಪ್ಪುಗಳನ್ನು ಮಾಡಬಾರದು.
• ಅರ್ಹತಾ ಪರೀಕ್ಷೆಗಳ ಅಂಕಪಟ್ಟಿ/ ಸೇವಾ ಪ್ರಮಾಣ ಪತ್ರಸಕ್ಷಮ ಪ್ರಾಧಿಕಾರದಿಂದ ನೀಡಲ್ಪಟ್ಟಿರುವ ಪ್ರವರ್ಗ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)ಗಳ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಒದಗಿಸುವುದು.
• ವಿವರಣಾ ಪುಸ್ತಕದಲ್ಲಿ ತಿಳಿಸಿರುವಂತೆ ಆನ್-ಲೈನ್ ಪಾವತಿಯನ್ನು ಮಾಡಬೇಕು.
ಈ ಕೆಳಕಂಡ ದಾಖಲಾತಿಗಳನ್ನು ಪ್ರವೇಶಾತಿ ಸಮಾಲೋಚನೆ ಸಮಯದಲ್ಲಿ ಸಲ್ಲಿಸಬೇಕು. (ಛಾಯಾಪ್ರತಿ)
* ಎಸ್.ಎಸ್.ಎಲ್.ಸಿ ಅಂಕ ಪಟ್ಟಿ
*ದ್ವಿತೀಯ ಪಿ.ಯು.ಸಿ ಅಂಕ ಪಟ್ಟಿ
* ಟಿ.ಸಿ.ಎಚ್, ಡಿ.ಎಡ್., ಬಿ.ಎಲ್.ಇ.ಡಿ./ಡಿ.ಎಲ್.ಇ.ಡಿ., ಅಂಕಪಟ್ಟಿ ಅಥವಾ ತತ್ಸಮಾನ ಅಂಕಪಟ್ಟಿ * ಪದವಿ ಅಂಕಪಟ್ಟಿಗಳು ಛಾಯಾ ಪ್ರತಿಗಳು,
* ಎಸ್.ಸಿ./ಎಸ್.ಟಿ, ಜಾತಿ ದೃಢೀಕರಣ ಪತ್ರ, (ಅನ್ವಯವಾದರೆ ಮಾತ್ರ)
* ಬಿ.ಪಿ.ಎಲ್ ಕಾರ್ಡ್ ಪ್ರತಿ (ಮಹಿಳಾ ಅಭ್ಯರ್ಥಿಗಳಿಗೆ) * ಆದಾಯ ದೃಢೀಕರಣ ಪತ್ರ (ಅನ್ವಯವಾದರೆ ಮಾತ್ರ)
* ಸೇವಾ ಪ್ರಮಾಣ ಪತ್ರ
* ಆಧಾರ್ ಕಾರ್ಡ್
*ಎರಡು ಸ್ಟ್ಯಾಂಪ್ ಅಳತೆಯ ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು ಅರ್ಜಿ ಪರಿಶೀಲನೆ ವೇಳೆ ಸಲ್ಲಿಸುವುದು.
*ದಾಖಲಾತಿ ಪರಿಶೀಲನೆಯನ್ನು ಕೇಂದ್ರ ಕಛೇರಿಯಲ್ಲಿ ನಡೆಸಲಾಗುವುದು, ದಾಖಲಾತಿ ಪರಿಶೀಲನೆಯ ವೇಳೆಯಲ್ಲಿ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು.*ವಿಶ್ವವಿದ್ಯಾನಿಲಯದ ಅನುಮೋದನೆ ನಂತರವೇ ಪ್ರವೇಶಾತಿಯು ಸಂಪೂರ್ಣಗೊಳ್ಳುತ್ತದೆ.*ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಪದವಿಗೆ ಪ್ರವೇಶಾತಿ ಹೊಂದಿದರೆ ವಿಶ್ವವಿದ್ಯಾನಿಲಯವು, ವಿದ್ಯಾರ್ಥಿಯು ಎರಡನೇ ಬಾರಿ ಪಡೆದ ಪ್ರವೇಶಾತಿಯನ್ನು ರದ್ದುಪಡಿಸುತ್ತದೆ.
*ಪ್ರವೇಶಾತಿ ಬಯಸುವ ಎಸ್.ಸಿ/ಎಸ್.ಟಿ ಅಭ್ಯರ್ಥಿಗಳು ಸಮಾಜಕಲ್ಯಾಣ ಇಲಾಖೆಯಿಂದ ಶುಲ್ಕ ಮರುಭರಿಕೆಗೆ ಒಳಪಟ್ಟು, ಶುಲ್ಕ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಅವರ ಕುಟುಂಬದ ವಾರ್ಷಿಕ ಆದಾಯವು ಸರ್ಕಾರವು ಕಾಲಕಾಲಕ್ಕೆ ನಿಗದಿ ಪಡಿಸಿದ ಮಿತಿಯಲ್ಲಿರಬೇಕು. (ನೋಡಿ ಅನುಬಂಧ-IV). ಸರ್ಕಾರವು ವಿದ್ಯಾರ್ಥಿಗಳ ಶುಲ್ಕವನ್ನು ಮರುಭರಿಕೆ ಮಾಡದಿದ್ದರೆ, ಸಂಬಂಧಪಟ್ಟ ವಿದ್ಯಾರ್ಥಿಗಳೇ ನಿಗದಿತ ಕಾಲಕ್ಕೆ ಶುಲ್ಕವನ್ನು ಭರಿಸಬೇಕಾಗುತ್ತದೆ. ತಪ್ಪಿದ್ದಲ್ಲಿ ಪರೀಕ್ಷೆಯನ್ನು ಬರೆಯಲು ಅನುಮತಿ ನೀಡುವುದಿಲ್ಲ.
* ಬಿ.ಪಿ.ಲ್. ಕುಟುಂಬಕ್ಕೆ ಸೇರಿದ ಮಹಿಳಾ ಅಭ್ಯರ್ಥಿಗಳು ಬೊಧನಾ ಶುಲ್ಕದಲ್ಲಿ ಶೇಕಡ 15%ರಷ್ಟು ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಇದಕ್ಕಾಗಿ ಪ್ರವೇಶ ಸಮಯದಲ್ಲಿ ಸಮಕ್ಷಮ ಪ್ರಾಧಿಕಾರದಿಂದ ಪಡೆದಿರುವ ಬಿ.ಪಿ.ಎಲ್. ಕಾರ್ಡ್‌ನ್ನು ಹಾಜರುಪಡಿಸಬೇಕು.
*ಗುರುತಿನ ಚೀಟಿಯನ್ನು ವಿದ್ಯಾರ್ಥಿಗಳಿಗೆ ಪ್ರವೇಶವು ಅಂಗೀಕೃತವಾದ ನಂತರ ನೀಡಲಾಗುವುದು. ಗುರುತಿನ ಚೀಟಿಯನ್ನು ಶಿಕ್ಷಣ ಕ್ರಮ ಮುಗಿಯುವವರೆಗೂ ಹೊಂದಿರಬೇಕು. ವಿಶ್ವವಿದ್ಯಾನಿಲಯದೊಂದಿಗೆ ವ್ಯವಹರಿಸುವ ಎಲ್ಲಾ ಸಂದರ್ಭಗಳಲ್ಲಿಯೂ ವಿದ್ಯಾರ್ಥಿಯು ತನ್ನ ನೊಂದಣಿ ಸಂಖ್ಯೆ ಶಿಕ್ಷಣ ಕ್ರಮವನ್ನು ಬರೆಯಬೇಕು.
*ಅಭ್ಯರ್ಥಿಗಳು ಕಾಲಕಾಲಕ್ಕೆ ವಿಶ್ವವಿದ್ಯಾನಿಲಯವು ಪಾಲಿಸತಕ್ಕದ್ದು. ಏ ಹೊರಡಿಸುವ ನಿಯಮ ನಿಬಂಧನೆಗಳನ್ನು
*ವಿದ್ಯಾರ್ಥಿಯು ತನ್ನ ವಯಸ್ಸು/ವಿದ್ಯಾರ್ಹತೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಗಳನ್ನು ನೀಡಿದರೆ ಅಥವಾ ಯಾವುದಾದರೂ ನಿಯಮಗಳನ್ನು ಉಲ್ಲಂಘಿಸಿದರೆ ಶಿಕ್ಷಣ ಕ್ರಮದಿಂದ ಹಾಗೂ ನೊಂದಣಿಯಿಂದ ಹೊರಗಿಡಲಾಗುವುದು, ಕಾನೂನು ಪ್ರಕಾರ ದಂಡ ವಿಧಿಸಲಾಗುವುದು ಹಾಗೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
*ಅಪೂರ್ಣ ಅರ್ಜಿಗಳನ್ನು ಯಾವುದೇ ಕಾರಣ ನೀಡದೇ ತಿರಸ್ಕರಿಸಲಾಗುವುದು,
*ಎಲ್ಲಾ ನ್ಯಾಯ ವ್ಯಾಜ್ಯಗಳು ಮೈಸೂರು ನಗರ ನ್ಯಾಯಾಲಯಗಳ ವ್ಯಾಪ್ತಿಗೆ ಮಾತ್ರ ಬರುತ್ತವೆ.
ಶಿಕ್ಷಣಕ್ರಮ ಸಂರಚನ
1 ಬಿ.ಎಡ್. ಪದವಿ ಕಾರ್ಯಕ್ರಮ (NCTE ಪ್ರಕಾರ)
a) ಕಾರ್ಯಕ್ರಮ ಅವಧಿ ಅವಧಿ: ೨ ವರ್ಷಗಳು
ಪದವಿಯನ್ನು ಪೂರ್ಣಗೊಳಿಸಲು ಗರಿಷ್ಠ ಅವಧಿ: ಕಾರ್ಯಕ್ರಮದ ಅವಧಿಯು ಎರಡು ಶೈಕ್ಷಣಿಕ ಅವಧಿಗಳು/ವರ್ಷಗಳು ಆಗಿದೆ. ಆದಾಗ್ಯೂ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಗರಿಷ್ಟ ಐದು ವರ್ಷಗಳ ಅವಧಿಯೊಳಗೆ ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ.
(NCTE ಪ್ರಕಾರ) ಶಿಕ್ಷಣ ಪದವಿ (ಬಿ.ಎಡ್.) ಕಾರ್ಯಕ್ರಮವು ವೃತ್ತಿಪರ ಕಾರ್ಯಕ್ರಮವಾಗಿದ್ದು, ಇದು ಉನ್ನತ ಪ್ರಾಥಮಿಕ (ತರಗತಿಗಳು VI-VIII) ಪ್ರೌಢ (IX, X), ಜೊತೆಗೆ ಹಿರಿಯ ಪ್ರೌಢ (XI, XII) ಹಂತಗಳ ಶಿಕ್ಷಕರನ್ನು ಸಿದ್ಧಗೊಳಿಸುತ್ತದೆ.
ಶಿಕ್ಷಣ ಪದವಿ ಕಾರ್ಯಕ್ರಮವು ಮುಕ್ತ ದೂರ ಕಲಿಕಾ ಕ್ರಮದಲ್ಲಿ ಸೇವಾನಿರತ ಶಿಕ್ಷಕರಿಗಾಗಿ ಇರುವ ವೃತ್ತಿಪರ ಕಾರ್ಯಕ್ರಮವಾಗಿದ್ದು, ಪ್ರಮುಖವಾಗಿ ಸೆಕೆಂಡರಿ ಶಿಕ್ಷಣದ ಔಪಚಾರಿಕ ತರಬೇತಿ ಪಡೆಯದೆ ಪ್ರಾಥಮಿಕ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೃತ್ತಿ ಸಾಮರ್ಥ್ಯವನ್ನು ಉನ್ನತೀಕರಿಸುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮವು ಅದರ ವಿನ್ಯಾಸ, ವಿಕಾಸ ಮತ್ತು ವಿತರಣೆಗೆ ಸಂಯೋಜಿತ ಕಲಿಕಾಕ್ರಮವನ್ನು ಬಳಸುತ್ತದೆ.
ಬಿ) ಅರ್ಜಿ ಸಲ್ಲಿಸಲು ಅರ್ಹತೆಗಳು
i ಕನಿಷ್ಟ ಶೇ. 50% ಅಂಕಗಳೊಂದಿಗೆ ಪದವಿ ಮತ್ತು/ಅಥವಾ ವಿಜ್ಞಾನ/ಸಾಮಾಜಿಕ ವಿಜ್ಞಾನಗಳು/ಮಾನವಿಕ ವಾಣಿಜ್ಯ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿದ ಅಭ್ಯರ್ಥಿಗಳು, ಇಂಜಿನಿಯರಿಂಗ್/ ತಂತ್ರಜ್ಞಾನದಲ್ಲಿ ಪದವಿ ಪಡೆದು ವಿಜ್ಞಾನ ಮತ್ತು ಗಣಿತಶಾಸ್ತ್ರದಲ್ಲಿ ಕನಿಷ್ಟ ಶೇ. 55% ರಷ್ಟು ಅಂಕಗಳೊಂದಿಗೆ ಪರಿಣಿತಿ ಪಡೆದಿರುವ ಅಥವಾ ಇನ್ಯಾವುದೇ ತತ್ಸಮಾನ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳು
ii. ತರಬೇತಿ ಹೊಂದಿ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು.
iii. ಮುಖಾಮುಖಿ ವಿಧಾನದ ಮೂಲಕ ಎನ್.ಸಿ.ಟಿ.ಇ. ಅಂಗೀಕೃತ ಶಿಕ್ಷಕ ಶಿಕ್ಷಣ ಕಾರ್ಯಕ್ರಮವನ್ನು ಕಡ್ಡಾಯವಾಗಿ ಪೂರ್ಣಗೊಳಿಸಿದವರು.
(ಎನ್.ಸಿ.ಟಿ.ಇ. ಅಂಗೀಕೃತ ಶಿಕ್ಷಕ ಶಿಕ್ಷಣ ಕಾರ್ಯಕ್ರಮವೆಂದರೆ ಟಿ.ಸಿ.ಹೆಚ್/ಡಿ.ಇಡಿ./ಡಿ.ಇಎಲ್.ಇಡಿ./ ಬಿ.ಎಲ್.ಇಡಿ. ಅಥವಾ ತತ್ಸಮಾನ)
ಪ್ರದೇಶಕ್ಕೆ ಆರ್ಯನಲ್ಲಿರುವುದು ಹೇಗೆ?
1.ಅರ್ಜಿಯನ್ನು ಆನ್‌ಲೈನ್ ಮೂಲಕ ಭರ್ತಿ ಮಾಡುವ ಹಂತಗಳು, ವಿಶ್ವವಿದ್ಯಾನಿಲಯದ ಅಂತರ್ಜಾಲ www.ksoumysuru.ac.in.
2 ಅಭ್ಯರ್ಥಿಗಳು ರೂ. 500/-ಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ ಶುಲ್ಕವಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿದ ನಂತರ ಪಾವತಿಸುವುದು.
3. ನೋಂದಣಿ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಪೂರ್ಣಗೊಳಿಸಿದ ನಂತರ ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವುದು.
4. ಅಭ್ಯರ್ಥಿಗಳು ಆನ್‌ಲೈನ್ ಪ್ರಕ್ರಿಯೆ ಅಂತಿಮಗೊಳಿಸಿದ ನಂತರ ಅರ್ಜಿಯ ಪ್ರತಿಯನ್ನು ಪ್ರಿಂಟ್ ಪಡೆಯುವುದು.
5. ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕು.
6. ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ವಿಶ್ವವಿದ್ಯಾನಿಲಯದ ಅಂತರ್ಜಲದಲ್ಲಿ ಪ್ರಕಟಿಸಲಾಗುವುದು.
7. ಆಯ್ಕೆಯಾದ ಅಭ್ಯರ್ಥಿಗಳು ಪ್ರವೇಶಾತಿ ಸಮಾಲೋಚನೆ ಮತ್ತು ದಾಖಲಾತಿಗಳ ಪರಿಶೀಲನೆಗಾಗಿ ಶಿಕ್ಷಣಶಾಸ್ತ್ರ ವಿಭಾಗ, ಕರಾಮುವಿ, ಮೈಸೂರು ಇಲ್ಲಿಗೆ ಭೇಟಿ ನೀಡುವುದು. ಪರಿಶೀಲನೆಗೆ
8, ಅಂತಹ ಅಭ್ಯರ್ಥಿಗಳು ಪ್ರಿಂಟಿ ಪಡೆದ ಅರ್ಜಿಯ ಜೊತೆ ಮೂಲ ದಾಖಲಾತಿಗಳನ್ನು ಪರಿಶೀಲನೆಗೆ ತರಬೇಕಾಗುತ್ತದೆ.
9, ಅಯ್ಕೆಯಾದ ಅಭ್ಯರ್ಥಿಗಳ ದಾಖಲಾತಿಗಳನ್ನು ಪ್ರವೇಶಾತಿ ಸಮಾಲೋಚನಾ ಸಂದರ್ಭದಲ್ಲಿ ಪರಿಶೀಲಿಸಲಾಗುತ್ತದೆ.
10, ಸ್ಥಾನಗಳ ಹಂಚಿಕೆ: ಕೋಷ್ಟಕ ಪ್ರಕಾರ ಯಶಸ್ವಿಯಾಗಿ ದಾಖಲಾತಿಗಳ ಪರಿಶೀಲನೆ ಪ್ರಕ್ರಿಯೆ ಪೌರ್ಣಗೊಳಿಸಿದ ಅಭ್ಯರ್ಥಿಗಳ ಹೆಸರುಗಳನ್ನು ವಿಶ್ವವಿದ್ಯಾನಿಲಯದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.
11. ಅಯ್ಕೆಯಾದ ಅಭ್ಯರ್ಥಿಗಳು ದಾಖಲಾತಿಗಳ ಪರಿಶೀಲನೆ ನಂತರ ನಿಗದಿತ ಶುಲ್ಕವನ್ನು ಪಾವತಿಸುವುದು.