ಗಣರಾಜ್ಯೋತ್ಸವ ಸಮಾರಂಭ: ನಿರೂಪಣೆ ಎಂಬ ಈ ಪೋಸ್ಟ್‌ನಲ್ಲಿ ಭಾರತ ಗಣರಾಜ್ಯೋತ್ಸವದ ಮಹತ್ವ, ಅದರ ಐತಿಹಾಸಿಕ ಹಿನ್ನೆಲೆ ಮತ್ತು ಸಮಾರಂಭದ ನಿರೂಪಣೆಯನ್ನು ಕ್ರಮಬದ್ಧವಾಗಿ ಪರಿಚಯಿಸಲಾಗಿದೆ. ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಗಣರಾಜ್ಯೋತ್ಸವವನ್ನು ಭಾವಪೂರ್ಣವಾಗಿ ಮತ್ತು ಶಿಸ್ತಿನಿಂದ ನಡೆಸಲು ಬೇಕಾದ ನಿರೂಪಣಾ ಭಾಷೆ, ಶುಭಾರಂಭದ ಮಾತುಗಳು, ಅತಿಥಿಗಳ ಸ್ವಾಗತ, ಧ್ವಜಾರೋಹಣ, ದೇಶಭಕ್ತಿ ಗೀತಗಳು ಹಾಗೂ ಸಮಾರೋಪದ ಘೋಷಣೆಗಳ ಉದಾಹರಣೆಗಳನ್ನು ಇಲ್ಲಿ ನೀಡಲಾಗಿದೆ.
ಈ ಲೇಖನವು ನಿರೂಪಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದು, ಗಣರಾಜ್ಯೋತ್ಸವ ಸಮಾರಂಭವನ್ನು ಅರ್ಥಪೂರ್ಣವಾಗಿ ಮತ್ತು ಸ್ಮರಣೀಯವಾಗಿ ನಡೆಸಲು ಸಹಾಯ ಮಾಡುತ್ತದೆ.
ಗಣರಾಜ್ಯೋತ್ಸವ ಸಮಾರಂಭ: ನಿರೂಪಣೆ
ಅದಕ್ಕೇ ನಮ್ಮ ಭಾರತ ದೇಶ ಅತಿ ದೊಡ್ಡ ಸಂವಿಧಾನದ ಮಮ್ಮೆ!”
ಗೌರವಾನ್ವಿತ ಅಧ್ಯಕ್ಷರೇ, ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳೇ, ನಮ್ಮ ಶಾಲೆಯ ಪ್ರಾಂಶುಪಾಲರೇ, ನೆಚ್ಚಿನ ಶಿಕ್ಷಕರೇ ಹಾಗೂ ನನ್ನ ಪ್ರೀತಿಯ ವಿದ್ಯಾರ್ಥಿ ಮಿತ್ರರೇ, ಇಂದು ನಾವು ಭಾರತದ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಮತ್ತು ಅಭಿಮಾನದಿಂದ ಆಚರಿಸಲು ಇಲ್ಲಿ ಸೇರಿದ್ದೇವೆ. ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹಾರ್ದಿಕ ಸ್ವಾಗತವನ್ನು ಕೋರುತ್ತೇನೆ.
ಈಗ ಕಾರ್ಯಕ್ರಮದ ಅತಿ ಮಹತ್ವದ ಘಟ್ಟವಾದ ಧ್ವಜಾರೋಹಣಕ್ಕೆ ಸಮಯವಾಗಿದೆ.
ಆದೇಶ: “ಎಲ್ಲಾ ವಿದ್ಯಾರ್ಥಿಗಳು ನೇರವಾಗಿ ನಿಲ್ಲಬೇಕು. ಸಾವಧಾನ್… ವಿಶ್ರಾಮ್… ಸಾವಧಾನ್!”
ನಮ್ಮ ಗೌರವಾನ್ವಿತ ಮುಖ್ಯ ಅತಿಥಿಗಳು ಧ್ವಜವನ್ನು ಹಾರಿಸಿ, ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸಬೇಕೆಂದು ವಿನಂತಿಸುತ್ತೇನೆ.
(ರಾಷ್ಟ್ರಗೀತೆ ಮುಗಿಯುವವರೆಗೆ ಎಲ್ಲರೂ ಸಲ್ಯೂಟ್ ಮಾಡಬೇಕು…)
‘ಅತಿಥಿ ದೇವೋ ಭವ’ ಎನ್ನುವುದು ನಮ್ಮ ಸಂಸ್ಕೃತಿಯ ಅಡಿಪಾಯ. ನಮ್ಮ ಅತಿಥಿಗಳನ್ನು ಪ್ರೀತಿಯ ಮಾತುಗಳಿಂದ ಸ್ವಾಗತಿಸೋಣ. ಜ್ಞಾನದ ಸಂಕೇತವಾದ ದೀಪವನ್ನು ಬೆಳಗಲು ನಾನು ಅತಿಥಿಗಳನ್ನು ವಿನಂತಿಸುತ್ತೇನೆ.
ಶಿಕ್ಷಣ ಮತ್ತು ಸಂವಿಧಾನದ ಜ್ಞಾನ ನಮ್ಮ ಬದುಕಿನ ದಾರಿಯನ್ನು ಬೆಳಗಲಿ!”
ಜನವರಿ 26 ಕೇವಲ ಒಂದು ದಿನಾಂಕವಲ್ಲ, ಅದು ಪ್ರತಿ ಭಾರತೀಯನ ಅಸ್ಮಿತೆ. ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಸಿಕ್ಕರೂ, ನಮಗೆ ನಮ್ಮದೇ ಕಾನೂನು ಇರಲಿಲ್ಲ. ಜನವರಿ 26, 1950 ರಂದು ಸಂವಿಧಾನ ಜಾರಿಗೆ ಬಂದಿತು. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ, ಸುಮಾರು 2 ವರ್ಷ, 11 ತಿಂಗಳು ಮತ್ತು 18 ದಿನಗಳ ಸತತ ಪರಿಶ್ರಮದಿಂದ ಈ ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನ ಸಿದ್ಧವಾಯಿತು.
ಯುವಶಕ್ತಿಯೇ ದೇಶದ ನಿಜವಾದ ಆಸ್ತಿ. ಈಗ ನಮ್ಮ ಶಾಲೆಯ ವಿದ್ಯಾರ್ಥಿಗಳು ತಮ್ಮ ಭಾಷಣದ ಮೂಲಕ ದೇಶಭಕ್ತಿಯನ್ನು ವ್ಯಕ್ತಪಡಿಸಲಿದ್ದಾರೆ. ನಂತರ, ದೇಶದ ವೀರ ಯೋಧರ ತ್ಯಾಗವನ್ನು ಸ್ಮರಿಸುತ್ತಾ ಸುಂದರ ದೇಶಭಕ್ತಿ ಗೀತೆಯನ್ನು ಸಾದರಪಡಿಸಲು ವಿದ್ಯಾರ್ಥಿಗಳನ್ನು ವೇದಿಕೆಗೆ ಆಹ್ವಾನಿಸುತ್ತೇನೆ.
ಅಧ್ಯಕ್ಷರ ಮಾರ್ಗದರ್ಶನದ ನುಡಿಗಳ ನಂತರ, ಈ ದಿನವನ್ನು ಅರ್ಥಪೂರ್ಣವಾಗಿಸಿದ ಅತಿಥಿಗಳಿಗೆ ಮತ್ತು ಸಹಕರಿಸಿದ ಎಲ್ಲರಿಗೂ ವಂದನೆ ಸಲ್ಲಿಸುವ ಸಮಯ.
ಹಾಗೆಯೇ ನಿಮ್ಮೆಲ್ಲರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ.”



