Class-6 KANNADA (SL) SA-2 Model Question Paper-2

Class – 6 Kannada (SL) | Marks – 40 ಎರಡನೆಯ ಸಂಕಲಣಾತ್ಮಕ ಮೌಲ್ಯಮಾಪನ (SA – 2) 2025-26 ಮಾದರಿ ಪ್ರಶ್ನಪತ್ರಿಕೆ – 2

6ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಎರಡನೆಯ ಸಂಕಲಣಾತ್ಮಕ ಮೌಲ್ಯಮಾಪನ (SA-2) 2025-26 ಪರೀಕ್ಷೆಗೆ ಸಹಾಯವಾಗುವಂತೆ ಈ ಕನ್ನಡ (SL) ಮಾದರಿ ಪ್ರಶ್ನಪತ್ರಿಕೆ – 2 ಅನ್ನು ಸಿದ್ಧಪಡಿಸಲಾಗಿದೆ. ಈ ಪ್ರಶ್ನಪತ್ರಿಕೆ ಕರ್ಣಾಟಕ ರಾಜ್ಯ ಪಠ್ಯಕ್ರಮದ ಅಧ್ಯಯನ ಫಲಿತಾಂಶಗಳ (Learning Outcomes) ಆಧಾರದ ಮೇಲೆ ರೂಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಪಾಠದ ಅರ್ಥಗ್ರಹಣ, ಭಾಷಾ ಕೌಶಲ್ಯ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿಕೊಳ್ಳಲು ಸಹಾಯವಾಗುತ್ತದೆ.

ಈ ಮಾದರಿ ಪ್ರಶ್ನಪತ್ರಿಕೆಯ ಉದ್ದೇಶ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮಾದರಿಯನ್ನು ಪರಿಚಯಿಸುವುದು ಮತ್ತು ಪರೀಕ್ಷೆಗೆ ತಯಾರಾಗಲು ಸರಿಯಾದ ಮಾರ್ಗದರ್ಶನ ನೀಡುವುದು. ವಿದ್ಯಾರ್ಥಿಗಳು ಈ ಪ್ರಶ್ನಪತ್ರಿಕೆಯ ಮೂಲಕ ವಿವಿಧ ರೀತಿಯ ಪ್ರಶ್ನೆಗಳ ಅಭ್ಯಾಸ ಮಾಡಬಹುದು. ಜೊತೆಗೆ ಶಿಕ್ಷಕರಿಗೂ ಪ್ರಶ್ನಪತ್ರಿಕೆ ರೂಪಿಸುವಲ್ಲಿ ಇದು ಉಪಯುಕ್ತವಾಗುತ್ತದೆ.

ಪ್ರಶ್ನಪತ್ರಿಕೆಯ ಮುಖ್ಯ ಲಕ್ಷಣಗಳು

  • • ಪರೀಕ್ಷೆಯ ಮಾದರಿಯಂತೆ ಸಿದ್ಧಪಡಿಸಿದ ಪ್ರಶ್ನೆಗಳು
  • • ಅಧ್ಯಯನ ಫಲಿತಾಂಶಗಳನ್ನು (Learning Outcomes) ಆಧರಿಸಿದ ಪ್ರಶ್ನೆಗಳು
  • • ಭಾಷಾ ಕೌಶಲ್ಯಗಳಾದ ಓದು, ಬರವಣಿಗೆ ಮತ್ತು ಅರ್ಥಗ್ರಹಣವನ್ನು ಪರಿಶೀಲಿಸುವ ಪ್ರಶ್ನೆಗಳು
  • • ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಅನುಕೂಲಕರವಾದ ವಿನ್ಯಾಸ
  • • ಶಿಕ್ಷಕರಿಗೆ ಮಾರ್ಗದರ್ಶಕವಾಗುವ ಪ್ರಶ್ನೆಗಳ ಮಾದರಿ

ತರಗತಿ: 6
ವಿಷಯ: ಕನ್ನಡ (SL)
ಒಟ್ಟು ಅಂಕಗಳು: 40
ಸಮಯ: 90 ನಿಮಿಷಗಳು

ಈ ಪ್ರಶ್ನಪತ್ರಿಕೆಗಳನ್ನು ಸುಲಭವಾಗಿ ಬಳಸಲು ಎಲ್ಲಾ ಪ್ರಶ್ನಪತ್ರಿಕೆಗಳು Printable PDF Format ನಲ್ಲಿ ಲಭ್ಯವಿವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಮುದ್ರಿಸಿ ಅಭ್ಯಾಸಕ್ಕೆ ಬಳಸಬಹುದು.


* Special Note / ವಿಶೇಷ ಸೂಚನೆ:

These question papers are only for model purpose. Teachers can change any question or content as per their requirement.

ಈ ಪ್ರಶ್ನಪತ್ರಿಕೆಗಳು ಕೇವಲ ಮಾದರಿ (Model) ಉದ್ದೇಶಕ್ಕಾಗಿ ಮಾತ್ರ ಸಿದ್ಧಪಡಿಸಲಾಗಿದೆ. ಶಿಕ್ಷಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಯಾವುದೇ ಪ್ರಶ್ನೆ ಅಥವಾ ವಿಷಯವನ್ನು ಬದಲಾಯಿಸಬಹುದು.
SA-2 Class 6 Kannada SL Question Paper 2026
ಸಂಕಲನಾತ್ಮಕ ಮೌಲ್ಯಮಾಪನ -2 ಮಾರ್ಚ್-2026
SUMMATIVE ASSESSMENT-2 MARCH-2026
MODEL QUESTION PAPER-2
ತರಗತಿ: VI (6ನೇ ತರಗತಿ)
ವಿಷಯ: ಕನ್ನಡ (SL)
ಅಂಕಗಳು: 40
ಅವಧಿ: 90 ನಿಮಿಷಗಳು
ಶಾಲೆಯ ಹೆಸರು: _____________________________________
ಪ್ರಶ್ನೆ 1. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ (1 mark × 4 = 4 Marks)
1. ಜೂಲಿಯೋ ಇಗ್ಲೆಶಿಯಸ್ ಯಾವ ದೇಶದವನು?
A) ಭಾರತ B) ಸ್ಪೇನ್ C) ಅಮೆರಿಕ D) ಇಂಗ್ಲೆಂಡ್
2. ಮಾಲತಿ ಹೊಳ್ಳ ಅವರಿಗೆ ಬಾಲ್ಯದಲ್ಲೇ ತಗುಲಿದ ರೋಗ ಯಾವುದು?
A) ಜ್ವರ B) ಸಿಡುಬು C) ಪೋಲಿಯೋ D) ಕೆಮ್ಮು
3. ‘ಐಕ್ಯಗಾನ’ ಪದ್ಯದ ಕವಿ ಯಾರು?
A) ಕುವೆಂಪು B) ಜಿ.ಎಸ್. ಶಿವರುದ್ರಪ್ಪ C) ಬೇಂದ್ರೆ D) ಕೆ.ಎಸ್. ನರಸಿಂಹಸ್ವಾಮಿ
4. ‘ಚುಟುಕುಗಳು’ ಪದ್ಯದ ಪ್ರಕಾರ ಆಗಸದ ಹೊಲದೊಳಗೆ ಏನನ್ನು ಬಿತ್ತಲಾಗಿದೆ?
A) ಹತ್ತಿ B) ಬೆಳೆ C) ಚುಕ್ಕೆಗಳು D) ಕಾಳುಗಳು
ಪ್ರಶ್ನೆ 2. ಬಿಟ್ಟ ಸ್ಥಳಗಳನ್ನು ತುಂಬಿರಿ (1 mark × 4 = 4 Marks)
1. ಅದೃಷ್ಟದ ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ________ ತೆರೆದುಕೊಳ್ಳುತ್ತದೆ.
2. ಆಕಾಶದಲ್ಲಿ ಸಾವಿರ ಚುಕ್ಕೆಗಳಿದ್ದರೂ ಹಗಲಿಗೆ ________ ಒಬ್ಬನೇ.
3. ಮಲ್ಲ ಕಂಬಕ್ಕೆ ಹತ್ತುವ ಮೊದಲು ಮೈಗೆ ________ ಸವರಿಕೊಳ್ಳುತ್ತಾರೆ.
4. ‘ಸತ್ಯ’ ಪದದ ವಿರುದ್ಧಾರ್ಥಕ ಪದ ________.
ಪ್ರಶ್ನೆ 3. ಒಂದೊಂದು ವಾಕ್ಯದಲ್ಲಿ ಉತ್ತರಿಸಿ (Answer in one sentence) (1 mark × 4 = 4 Marks)
1. ಮೊನಾಲಿಸಾ ಯಾರ ಪ್ರಾಣವನ್ನು ಉಳಿಸಿದಳು?
2. ‘ಸುಂಟರಗಾಳಿ’ ಪದ್ಯದ ಕವಿ ಯಾರು?
3. ಜಾಣ ಆಮೆ ಯಾರೊಡನೆ ಸ್ನೇಹ ಬೆಳೆಸಿತು?
4. ಕಟ್ಟಿಬೊಮ್ಮುವಿನ ಇನ್ನೊಂದು ಹೆಸರೇನು?
ಪ್ರಶ್ನೆ 4. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ (2 Mark Questions) (2 marks × 10 = 20 Marks)
1. ಜೂಲಿಯೋ ಅಪಘಾತದ ನಂತರ ತನ್ನ ನೋವನ್ನು ಹೇಗೆ ಮರೆತನು?
2. ಮಾಲತಿ ಹೊಳ್ಳ ಅವರ ಸಾಧನೆಯ ಗುಟ್ಟು ಏನು?
3. ಹಸುಗಳ ಬಣ್ಣ ಬೇರೆಯಾಗಿದ್ದರೂ ಹಾಲು ಹೇಗಿರುತ್ತದೆ?
4. ಮಲ್ಲಕಂಬವನ್ನು ಕುಸ್ತಿ ಆಡುವವರು ಏಕೆ ಕಲಿಯುತ್ತಾರೆ?
5. ‘ಐಕ್ಯಗಾನ’ ಪದ್ಯದಲ್ಲಿ ಕವಿ ಯಾವುದರಲ್ಲಿ ಏಕತೆಯನ್ನು ಕಾಣುತ್ತಾರೆ?
6. ಸುಂಟರಗಾಳಿ ಬಂದಾಗ ಏನಾಯಿತು?
7. ಜಾಣ ಆಮೆ ಪದ್ಯದಲ್ಲಿ ಹಂಸಗಳು ಆಮೆಯನ್ನು ಹೇಗೆ ಎತ್ತಿಕೊಂಡು ಹೋದವು?
8. ಭಾಷಾಭ್ಯಾಸ: ‘ಆಸೆ’ ಮತ್ತು ‘ಕೀರ್ತಿ’ ಪದಗಳ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
9. ಭಾಷಾಭ್ಯಾಸ: ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ: ಅ) ಸ್ಫೂರ್ತಿ ಬ) ಯಶಸ್ಸು.
10. ಭಾಷಾಭ್ಯಾಸ: ನಾಮಪದ ಎಂದರೇನು? ಎರಡು ಉದಾಹರಣೆ ಕೊಡಿ.
ಪ್ರಶ್ನೆ 5. ದೀರ್ಘ ಉತ್ತರ / ಚಟುವಟಿಕೆ (4 marks × 2 = 8 Marks)
1. ಈ ಪದ್ಯಭಾಗವನ್ನು ಪೂರ್ಣಗೊಳಿಸಿ.

“ಒಂದೇ ಒಂದೇ, ನಾವೆಲ್ಲರು ……………………..
…………………………………………………………………
………………………………………………………………… ಮರಕ್ಕೆ ಬುಡ ಒಂದೇ”
2. “ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ವಿಶೇಷಚೇತನರ ಯಾವುದಾದರೂ 4 ಹೆಸರುಗಳನ್ನು ಬರೆಯಿರಿ.”

ಮಾದರಿ ಉತ್ತರ ಪತ್ರಿಕೆ (MODEL ANSWER SHEET)

ಶಾಲೆಯ ಹೆಸರು: _____________________________________

ಪ್ರಶ್ನೆ 1: 1. B) ಸ್ಪೇನ್, 2. C) ಪೋಲಿಯೋ, 3. B) ಜಿ.ಎಸ್. ಶಿವರುದ್ರಪ್ಪ, 4. C) ಚುಕ್ಕೆಗಳು.

ಪ್ರಶ್ನೆ 2: 1. ದಾರಿ, 2. ರವಿ (ಸೂರ್ಯ), 3. ಔಡಲೆಣ್ಣೆ/ಎಣ್ಣೆ, 4. ಅಸತ್ಯ.

ಪ್ರಶ್ನೆ 3: 1. ಕುರುಡ ಹುಡುಗನ. 2. ಕಯ್ಯಾರ ಕಿಞ್ಞಣ್ಣರೈ. 3. ಹಂಸಗಳೊಂದಿಗೆ. 4. ಗಟ್ಟಿಬೊಮ್ಮು.

ಪ್ರಶ್ನೆ 4:
1. ಹಾಡುಗಳನ್ನು ಬರೆಯುವ ಮತ್ತು ಗಿಟಾರ್ ನುಡಿಸುವ ಮೂಲಕ ನೋವನ್ನು ಮರೆತನು.
2. ಸದಾ ಚಟುವಟಿಕೆಯಿಂದಿರುವುದು ಮತ್ತು ನಗುತ್ತಲೇ ಜೀವನವನ್ನು ಎದುರಿಸುವುದು.
3. ಹಾಲು ಯಾವಾಗಲೂ ಬೆಳ್ಳಗೆ ಒಂದೇ ರೀತಿ ಇರುತ್ತದೆ.
4. ಕುಸ್ತಿಯಲ್ಲಿ ಎದುರಾಳಿಯನ್ನು ಸೋಲಿಸುವ ತಂತ್ರ ಮತ್ತು ಪಟ್ಟುಗಳನ್ನು ಕಲಿಯಲು.
5. ನದಿಗಳು ಹಲವಾದರೂ ಸಮುದ್ರ ಒಂದೇ, ಮರಕ್ಕೆ ಕೊಂಬೆಗಳು ಹಲವಾದರೂ ಬುಡ ಒಂದೇ ಎನ್ನುವಲ್ಲಿ ಕವಿ ಏಕತೆಯನ್ನು ಕಾಣುತ್ತಾರೆ.
6. ಮರಗಳು ತೂಗಿ ಬಾಗಿದವು, ದನಕರುಗಳು ಹೆದರಿ ಓಡಿದವು.
7. ಎರಡು ಹಂಸಗಳು ಒಂದು ಉದ್ದವಾದ ಕೋಲನ್ನು ಕಚ್ಚಿ ಹಿಡಿದವು, ಆಮೆಯು ಕೋಲಿನ ಮಧ್ಯದಲ್ಲಿ ಕಚ್ಚಿ ಹಿಡಿದುಕೊಂಡಿತು.
8. ಆಸೆ x ನಿರಾಸೆ, ಕೀರ್ತಿ x ಅಪಕೀರ್ತಿ.
9. ಅ) ಉತ್ತಮ ಪುಸ್ತಕಗಳು ನಮಗೆ ಸ್ಫೂರ್ತಿ ನೀಡುತ್ತವೆ. ಬ) ಶ್ರಮದಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತ.
10. ವ್ಯಕ್ತಿ, ಸ್ಥಳ ಹಾಗೂ ವಸ್ತುವಿನ ಹೆಸರನ್ನು ಸೂಚಿಸುವ ಪದಗಳನ್ನು ನಾಮಪದ ಎನ್ನುತ್ತಾರೆ. ಉದಾ: ರಾಜು, ಬೆಂಗಳೂರು, ಪುಸ್ತಕ.

ಪ್ರಶ್ನೆ 5:
1. “ಒಂದೇ ಒಂದೇ, ನಾವೆಲ್ಲರು ಒಂದೇ, ಈ ದೇಶದೊಳೆಲ್ಲಿದ್ದರೂ ಭಾರತ ನಮಗೊಂದೇ ಹಲವು ಕೊಂಬೆಗಳ ಚಾಚಿಕೊಂಡರೂ ಮರಕ್ಕೆ ಬುಡ ಒಂದೇ”
2. ವಿದ್ಯಾರ್ಥಿಗಳು ಕ್ರೀಡೆ, ಕಲೆ, ಅಥವಾ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶೇಷಚೇತನರ (ಉದಾ: ಮಾಲತಿ ಹೊಳ್ಳ) ಹೆಸರುಗಳನ್ನು ಪಟ್ಟಿ ಮಾಡಬೇಕು.

ಮೌಖಿಕ ಪರೀಕ್ಷೆ (ORAL TEST) – 20 ಪ್ರಶ್ನೆಗಳು

  1. ಮಾಲತಿ ಹೊಳ್ಳ ಅವರಿಗೆ ಯಾವ ಪ್ರಶಸ್ತಿ ಬಂದಿದೆ? (ಪದ್ಮಶ್ರೀ/ಅರ್ಜುನ)
  2. ಜೂಲಿಯೋ ಇಗ್ಲೆಶಿಯಸ್ ಯಾವ ಆಟ ಆಡುತ್ತಿದ್ದನು? (ಫುಟ್ಬಾಲ್)
  3. ‘ಐಕ್ಯಗಾನ’ ಪದ್ಯ ಬರೆದವರು ಯಾರು? (ಜಿ.ಎಸ್. ಶಿವರುದ್ರಪ್ಪ)
  4. ನದಿಗಳು ಎಲ್ಲಿಗೆ ಹೋಗಿ ಸೇರುತ್ತವೆ? (ಸಮುದ್ರಕ್ಕೆ/ಕಡಲಿಗೆ)
  5. ಮಲ್ಲಕಂಬ ಆಟಕ್ಕೆ ಯಾವ ಮರವನ್ನು ಬಳಸುತ್ತಾರೆ? (ತೇಗ)
  6. ಮರದ ಮೇಲೆ ಏನಿರುತ್ತವೆ? (ಕೊಂಬೆಗಳು/ಎಲೆಗಳು)
  7. ಹಗಲು ಆಕಾಶದಲ್ಲಿ ಏನು ಕಾಣುತ್ತದೆ? (ಸೂರ್ಯ/ರವಿ)
  8. ಮಾಲತಿ ಹೊಳ್ಳ ಅವರು ಎಷ್ಟು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು? (32 ಬಾರಿ)
  9. ಜೂಲಿಯೋಗೆ ಆಸ್ಪತ್ರೆಯಲ್ಲಿ ಯಾವ ವಾದ್ಯವನ್ನು ದಾದಿ ಕೊಟ್ಟಳು? (ಗಿಟಾರ್)
  10. ‘ಬೆಳಕು’ ಪದದ ವಿರುದ್ಧ ಪದವೇನು? (ಕತ್ತಲು)
  11. ಒಂದು ಹೆಸರನ್ನು ಸೂಚಿಸುವ ಪದ ಯಾವುದು? (ನಾಮಪದ)
  12. ಮಲ್ಲಕಂಬಕ್ಕೆ ಹತ್ತುವ ಮೊದಲು ಮೈಗೆ ಏನು ಸವರಿಕೊಳ್ಳುತ್ತಾರೆ? (ಎಣ್ಣೆ)
  13. ಕಟ್ಟಿಬೊಮ್ಮು ಎಲ್ಲಿಯ ರಾಜನಾಗಿದ್ದನು? (ಪಾಂಚಾಲಂಕುರುಚ್ಚಿ)
  14. ಜಾಣ ಆಮೆ ಯಾರ ಜೊತೆ ಆಕಾಶಕ್ಕೆ ಹಾರಿತು? (ಹಂಸಗಳ ಜೊತೆ)
  15. ಚುಟುಕುಗಳ ಪ್ರಕಾರ, ಆಗಸದ ಹೊಲದಲ್ಲಿ ಏನನ್ನು ಬಿತ್ತಿದ್ದಾರೆ? (ಚುಕ್ಕೆಗಳನ್ನು)
  16. ಮೊನಾಲಿಸಾ ಯಾರ ಪ್ರಾಣ ಉಳಿಸಿದಳು? (ಕುರುಡ ಹುಡುಗನ)
  17. ‘ಆಸೆ’ ಪದದ ವಿರುದ್ಧಾರ್ಥಕ ಪದವೇನು? (ನಿರಾಸೆ)
  18. ಮಾಲತಿ ಹೊಳ್ಳ ಸ್ಥಾಪಿಸಿದ ಸಂಸ್ಥೆಯ ಹೆಸರೇನು? (ಮಾತೃ ಫೌಂಡೇಶನ್)
  19. ‘ಸಂತೋಷ’ ಪದದ ಸಮಾನಾರ್ಥಕ ಪದ ಹೇಳಿ. (ಖುಷಿ/ಹರ್ಷ)
  20. ಸುಂಟರಗಾಳಿ ಬಂದಾಗ ಪ್ರಾಣಿಗಳು ಏನು ಮಾಡಿದವು? (ಹೆದರಿ ಓಡಿದವು)

ಡೌನ್‌ಲೋಡ್ ಲಿಂಕ್‌ಗಳು

DOWNLOAD QUESTION PAPER DOWNLOAD ANSWER SHEET DOWNLOAD ORAL TEST
Join WhatsApp Channel Join Now
Telegram Group Join Now