LEARNING OUTCOMES 4th KANNADA (ಕಲಿಕಾ ಫಲಗಳು ತರಗತಿ – ೪ ವಿಷಯ – ಕನ್ನಡ)

ಕಲಿಕಾ ಚೇತರಿಕೆ ೨೦೨೨

ತರಗತಿ – ೪     ವಿಷಯ – ಕನ್ನಡ (ಪ್ರಥಮ
ಭಾಷೆ)



2ನೇ ತರಗತಿ – ಕಲಿಕಾ
ಫಲಗಳು

01.ವಿವಿಧ ಉದ್ದೇಶವನ್ನು ಈಡೇರಿಸಿಕೊಳ್ಳಲು,
ತನ್ನ ಭಾಷೆ / ಶಾಲೆಯ
ಭಾಷೆಯನ್ನು ಬಳಸಿ         ವ್ಯವಹರಿಸುತ್ತಾರೆ. ಉದಾ: ತಿಳಿದುಕೊಳ್ಳಲು
,
ಪ್ರಶ್ನೆ ಕೇಳಲು,
ತಮ್ಮದೇ ಆದ
ಅನುಭವಗಳನ್ನು ಹೇಳಲು
, ತರ್ಕಗಳನ್ನು ನೀಡಲು ಮುಂತಾದವ, ವಿವಿಧ ಉದ್ದೇಶಗಳಿಗಾಗಿ
ತನ್ನ ಭಾಷೆಯನ್ನು ಮತ್ತು ಶಾಲೆಯ ಭಾಷೆಯನ್ನು ಬಳಸಿಕೊಂಡು ಮಾತುಕತೆಯಾಡುತ್ತಾರೆ. ಉದಾಹರಣೆಗೆ
ವಿಷಯವನ್ನು ಅರ್ಥೈಸಿಕೊಳ್ಳಲು ಪ್ರಶ್ನೆ ಕೇಳಲು
, ತನ್ನ ಸ್ವಂತದ ಅನುಭವಗಳನ್ನು ಹೇಳಿಕೊಳ್ಳಲು,
ಪರ್ಕಿಸಲು ಇತ್ಯಾದಿ.


02.ತಮ್ಮ ನಿಜ ಜೀವನದ ಮತ್ತು ಪರಿಸರ ಅಧಾರಿತ ಅನುಭವಗಳನ್ನು
ಆಲಿಸುತ್ತಿರುವ ವಿಷಯ ಸಾಮಗ್ರಿ ಅಂದರೆ ಕವಿತೆ
, ಕತೆ, ಪೋಸ್ಟರ್, ಜಾಹೀರಾತು ಮುಂತಾದವುಗಳೊಂದಿಗೆ ಸಂಬಂಧೀಕರಿಸಿ ಮಾತನಾಡಲು ಮತ್ತು
ಬರೆಯಲು ಸಮರ್ಥರಾಗುತ್ತಾರೆ. ಭಾಷೆಯಲ್ಲಿ ಅಂತರ್ಗತವಾಗಿರುವ ಧ್ವನಿ
,
ಪ್ರಾಸ,
ಲಯಗಳನ್ನು ಹಿಡಿದು
ಆಟವಾಡಿ ಆನಂದಿಸುತ್ತ ತಾನು ಕೃಶಃ ಪದಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಉದಾಹರಣೆಗೆ ಗೇರ್ ಗೇರ್
ಮಂಗಣ್ಣ
, ಹಾಕು ಲಾಗ ನೀನಣ್ಣ ಇತ್ಯಾದಿ.


3.ತಮ್ಮ ಕಲ್ಪನಾ ಶಕ್ತಿಯ ಸಹಾಯದಿಂದ ಕತೆ,
ಕವಿತೆಗಳನ್ನು
ಹೇಳುತ್ತಾರೆ / ಕೇಳುತ್ತಾರೆ / ವಿಸ್ತರಿಸುತ್ತಾರೆ. ಚಿತ್ರಗಳ ಸೂಕ್ಷ್ಮ ಮತ್ತು ಪ್ರತ್ಯೇಕ ಅಂಶಗಳ
ಬಗ್ಗೆ ಗಂಭೀರವಾದ ಅವಲೋಕನ ನಡೆಸುತ್ತಾರೆ
.


4.ಚಿತ್ರವೊಂದರಲ್ಲಿ ಅನುಕ್ರಮವಾಗಿ ಜೋಡಿಸಿದ ಬೇರೆ ಬೇರೆ ಘಟನೆ,
ಪಾತ್ರಗಳ ಸಂದರ್ಭ,
ಕಥೆ ಇವುಗಳನ್ನು ನೋಡಿ
ಗ್ರಹಿಸುತ್ತಾರೆ ಮತ್ತು ಮೆಚ್ಚಿಕೊಳ್ಳುತ್ತಾರೆ
.



 


     3ನೇ ತರಗತಿ- ಕಲಿಕಾ ಫಲಗಳು

5.ಪರಿಚಿತ ಮತ್ತು ಅಪರಿಚಿತ ಸನ್ನಿವೇಶ,
ಸಂಭಾಷಣೆ ಮತ್ತು
ಸಂವಾದಗಳನ್ನು ಅರ್ಥ ಮಾಡಿಕೊಂಡು ಆಲಿಸಿದ ರಚನೆಗಳ ವಿಷಯವನ್ನು ಘಟನೆಗಳು
,
ಪಾತ್ರಗಳು ಶಿರೋನಾಮೆ
ಮುಂತಾದವುಗಳ ಬಗ್ಗೆ ಮಾತನಾಡುತ್ತಾರೆ
, ಪ್ರಶ್ನಿಸುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ ಹಾಗೂ
ತಮ್ಮದೇ ಆದ ವಿಧಾನದಿಂದ (ಕವಿತೆ ಕತೆ ಮುಂತಾದವುಗಳನ್ನು) ತಮ್ಮದೇ ಆದ ಭಾಷೆಯಲ್ಲಿ
ಅಭಿವ್ಯಕ್ತಿಸುತ್ತಾರೆ ಮತ್ತು ತನ್ನ ಮಾತಿಗೆ ತಾರ್ಕಿಕ ಕಾರಣ ನೀಡುತ್ತಾರೆ
.


06.ಕತೆ, ಕವಿತೆ, ಮತ್ತು ಬೇರೆ ವಿಷಯ ಸಾಮಗ್ರಿಗಳನ್ನು ಓದಿ ಮುಖ್ಯವಿಷಯವನ್ನು ಗುರುತಿಸಿ
ತಿಳಿಯುವುದರೊಂದಿಗೆ ಅದಕ್ಕೆ ತಮ್ಮ ಕತೆ/ವಿಚಾರಗಳನ್ನು ಸೇರಿಸುತ್ತಾರೆ.



07.ವಿವಿಧ ಪ್ರಕಾರದ ರಚನೆಗಳು/ವಿಷಯ ಸಾಮಗ್ರಿಗಳನ್ನು (ಸಮಾಚಾರ ಪತ್ರಿಕೆ,
ಬಾಲ ಪತ್ರಿಕೆ..
ಮುಂತಾದವು) ತಿಳಿದು
, ಅನಂತರ ಅವುಗಳನ್ನು ಆಧರಿಸಿ ಪ್ರಶ್ನೆ ಕೇಳುತ್ತಾರೆ ಮತ್ತು ತಮ್ಮ
ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. ತರಗತಿಯಲ್ಲಿ ನಡೆಯುವ ಸಂವಾದದಲ್ಲಿ ಭಾಗವಹಿಸಿ
ಚರ್ಚಿಸುತ್ತಾರೆ
.



8.ತಮ್ಮ ಇಚ್ಛಾನುಸಾರ/ಶಿಕ್ಷಕರಿಂದ ನಿಶ್ಚಯಿಸಿದ ಘಟನೆಗಳಲ್ಲಿ ಬಂದಿರುವ
ಕಾಗುಣಿತದ ಬಗ್ಗೆ ಎಚ್ಚರಿಕೆ ವಹಿಸಿ ಸ್ವತಃ ಲೇಖನ ಬರೆಯುತ್ತಾರೆ. ವಿವಿಧ ಉದ್ದೇಶಗಳಿಗಾಗಿ
ಬರೆಯುತ್ತಿರುವ ಲೇಖನಗಳಲ್ಲಿ ಶಬ್ದಗಳ ಆಯ್ಕೆ
, ವಾಕ್ಯ ರಚನೆ, ತಮ್ಮ ಲೇಖನದ ಸ್ವರೂಪಗಳನ್ನು (ಉದಾ: ಮಿತ್ರನಿಗೆ ಪತ್ರ
ಬರೆಯುವುದು
, ಪತ್ರಿಕಾ ಸಂಪಾದಕರಿಗೆ ಪತ್ರ ಬರೆಯುವುದು) ಆಧರಿಸಿ ನಿರ್ಣಯದೊಂದಿಗೆ ಬರೆಯುತ್ತಾರೆ.



   4ನೇ ತರಗತಿ- ಕಲಿಕಾ ಫಲಗಳು

9.ಕಥೆ, ಕವಿತೆ ಮತ್ತು ಬೇರೆ ವಸ್ತು ವಿಷಯಗಳನ್ನು ತನ್ನದೆ ರೀತಿಯಲ್ಲಿ ಮತ್ತು
ಭಾಷೆಯಲ್ಲಿ ಹೇಳುತ್ತಾ ಅದರಲ್ಲಿ ತನ್ನದೆ ಸ್ವಂತದ ಕಥೆ
, ವಿಷಯಗಳನ್ನು
ಜೋಡಿಸುತ್ತಾರೆ
.


10.ಓದಿದ ವಿಷಯವಸ್ತು ಮತ್ತು ತಮಗೆ ದೈನಂದಿನ ಜೀವನದಲ್ಲಿ ಸ್ವತಃ ಅದ
ಅನುಭವಗಳನ್ನು ಸೇರಿಸಿ
, ಅವುಗಳಿಂದ ಉಂಟಾದ ಸಂವೇದನಾತ್ಮಕ ಮತ್ತು ವಿಚಾರಗಳನ್ನು ಮೌಖಿಕವಾಗಿ /
ಲಿಖಿತವಾಗಿ ಅಭಿವ್ಯಕ್ತಪಡಿಸುತ್ತಾರೆ (ಆಡುಭಾಷೆ / ಗ್ರಾಂಥಿಕ ಭಾಷೆ)
.



 

11.ಓದಿರುವ ಸಾಹಿತ್ಯಗಳ ವಿಷಯವಸ್ತು, ಘಟನೆಗಳು,
ಚಿತ್ರಗಳು,
ಪಾತ್ರಗಳು,
ಶಿರೋನಾಮೆ ಮುಂತಾದವುಗಳ
ಬಗ್ಗೆ ಮಾತನಾಡುತ್ತಾರೆ. ಪ್ರಶ್ನಿಸುತ್ತಾರೆ. ತಮ್ಮ ಅಭಿಪ್ರಾಯ ನೀಡುತ್ತಾರೆ. ತಮ್ಮ
ಅಭಿಪ್ರಾಯಗಳಿಗೆ ತಾರ್ಕಿಕ ಸಮರ್ಥನೆ ನೀಡುತ್ತಾರೆ.



12. ವಿವಿಧ ಪರಿಸ್ಥಿತಿ ಮತ್ತು ಉದ್ದೇಶಗಳಿಗೆ (ಸೂಚನಾ ಫಲಕದಲ್ಲಿ
ಹಾಕುವ ಸೂಚನೆಗಳು
, ವಸ್ತುಗಳ ಪಟ್ಟಿ ಕತೆ, ಕವಿತೆ, ಪತ್ರ, ಪ್ರಬಂಧ ಮುಂತಾದವು) ಅನುಸಾರವಾಗಿ ಬರೆಯುತ್ತಾರೆ.



13.ವಿವಿಧ ಸಾಹಿತ್ಯಗಳನ್ನು ಪರಸ್ಪರ ಕೇಳಲು,
ಓದಲು ಮತ್ತು ಅವುಗಳ
ಮೇಲೆ ಅನಿಸಿಕೆ ನೀಡಲು ಅವುಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಸೇರಿಸಲು
,
ವಿಸ್ತರಿಸಲು ಮತ್ತು
ಬೇರೆ ಬೇರೆ ವಿಧಾನದಲ್ಲಿ ಬರೆಯುತ್ತಾರೆ
.



 

helpdesk%20(1)

CLICK HERE TO DOWNLOAD ABOVE LEARNING OUTCOMES IN PDF 






Share with your best friend :)