NMMS ಪರೀಕ್ಷೆ ವಿಜ್ಞಾನ ಪ್ರಶ್ನಕೋಠಿ – 5

ಕರ್ನಾಟಕ NMMS ವಿಜ್ಞಾನ ಪ್ರಶ್ನಕೋಠಿ – 5

ಕರ್ನಾಟಕ NMMS ವಿಜ್ಞಾನ ಪ್ರಶ್ನಕೋಠಿ – 5

ಈ ಪ್ರಶ್ನಕೋಠಿಯು ಕರ್ನಾಟಕ NMMS ಶಿಷ್ಯವೇತನ ಪರೀಕ್ಷೆಯ ಶೈಕ್ಷಣಿಕ ಸಾಮರ್ಥ್ಯ ಪರೀಕ್ಷೆ (SAT) ವಿಭಾಗಕ್ಕಾಗಿ ಸಿದ್ಧಪಡಿಸಿದ 5ನೇ ಸರಣಿಯಾಗಿದೆ. ವಿದ್ಯಾರ್ಥಿಗಳು ಈ ಪ್ರಶ್ನೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಹಾಯಕವಾಗುತ್ತದೆ.

1. ವಾತಾವರಣದ ಗಾಳಿಯು ನಮ್ಮ ಮೇಲೆ ಹಾಕುವ ಒತ್ತಡವನ್ನು ಏನೆಂದು ಕರೆಯುತ್ತಾರೆ?
(A) ದ್ರವದ ಒತ್ತಡ (B) ವಾತಾವರಣದ ಒತ್ತಡ (C) ಗುರುತ್ವಾಕರ್ಷಣೆ (D) ಘರ್ಷಣೆ
ಸರಿಯಾದ ಉತ್ತರ: (B) ವಾತಾವರಣದ ಒತ್ತಡ
2. ಮೊದಲ ಸಂಪೂರ್ಣ ಕೃತಕ ಎಳೆ ಯಾವುದು?
(A) ರೇಯಾನ್ (B) ನೈಲಾನ್ (C) ಪಾಲಿಸ್ಟರ್ (D) ಅಕ್ರಿಲಿಕ್
ಸರಿಯಾದ ಉತ್ತರ: (B) ನೈಲಾನ್
3. ಲೋಹಗಳನ್ನು ಎಳೆದು ತಂತಿಗಳನ್ನಾಗಿ ಮಾಡಬಲ್ಲ ಗುಣವನ್ನು ಏನೆಂದು ಕರೆಯುತ್ತಾರೆ?
(A) ಕುಟ್ಟ್ಯತೆ (B) ತನ್ಯತೆ (C) ವಾಹಕತೆ (D) ಹೊಳಪು
ಸರಿಯಾದ ಉತ್ತರ: (B) ತನ್ಯತೆ (Ductility)
4. ಮನುಷ್ಯರಲ್ಲಿ ಗಂಡು ಹಾರ್ಮೋನ್ ಯಾವುದು?
(A) ಈಸ್ಟ್ರೋಜನ್ (B) ಟೆಸ್ಟೋಸ್ಟಿರೋನ್ (C) ಇನ್ಸುಲಿನ್ (D) ಥೈರಾಕ್ಸಿನ್
ಸರಿಯಾದ ಉತ್ತರ: (B) ಟೆಸ್ಟೋಸ್ಟಿರೋನ್
5. ನೀರಿನ ಮೂಲಕ ಹರಡುವ ರೋಗ ಯಾವುದು?
(A) ಕಾಲರಾ (B) ಕ್ಷಯ (C) ಸಿಡುಬು (D) ಮಲೇರಿಯಾ
ಸರಿಯಾದ ಉತ್ತರ: (A) ಕಾಲರಾ
6. ಯಾವ ನಕ್ಷತ್ರವು ಯಾವಾಗಲೂ ಉತ್ತರ ದಿಕ್ಕಿನಲ್ಲಿ ಕಾಣುತ್ತದೆ?
(A) ಸಿರಿಯಸ್ (B) ಧ್ರುವ ನಕ್ಷತ್ರ (C) ಸೂರ್ಯ (D) ಶುಕ್ರ
ಸರಿಯಾದ ಉತ್ತರ: (B) ಧ್ರುವ ನಕ್ಷತ್ರ
7. ಕಟ್ಟಡಗಳನ್ನು ಮಿಂಚಿನಿಂದ ರಕ್ಷಿಸಲು ಬಳಸುವ ಸಾಧನ ಯಾವುದು?
(A) ವಿದ್ಯುತ್ ದರ್ಶಕ (B) ಮಿಂಚು ವಾಹಕ (C) ಬ್ಯಾರೋಮೀಟರ್ (D) ಸಿಸ್ಮೋಗ್ರಾಫ್
ಸರಿಯಾದ ಉತ್ತರ: (B) ಮಿಂಚು ವಾಹಕ
8. ‘ಜೀವಕೋಶದ ನಿಯಂತ್ರಣ ಕೊಠಡಿ’ ಎಂದು ಯಾವುದನ್ನು ಕರೆಯುತ್ತಾರೆ?
(A) ಮೈಟೋಕಾಂಡ್ರಿಯಾ (B) ಕೋಶಕೇಂದ್ರ (C) ರೈಬೋಸೋಮ್ (D) ಕೋಶಪೊರೆ
ಸರಿಯಾದ ಉತ್ತರ: (B) ಕೋಶಕೇಂದ್ರ
9. ದ್ರವಗಳು ಮತ್ತು ಅನಿಲಗಳು ಉಂಟುಮಾಡುವ ಘರ್ಷಣೆಯನ್ನು ಏನೆಂದು ಕರೆಯುತ್ತಾರೆ?
(A) ಉರುಳುವ ಘರ್ಷಣೆ (B) ಜಾರುವ ಘರ್ಷಣೆ (C) ಡ್ರ್ಯಾಗ್ (D) ಸ್ಥಾಯಿ ಘರ್ಷಣೆ
ಸರಿಯಾದ ಉತ್ತರ: (C) ಡ್ರ್ಯಾಗ್ (Drag)
10. ಕಣ್ಣಿನ ಯಾವ ಭಾಗದಲ್ಲಿ ವಸ್ತುವಿನ ಪ್ರತಿಬಿಂಬ ಮೂಡುತ್ತದೆ?
(A) ಕಾರ್ನಿಯಾ (B) ರೆಟಿನಾ (C) ಐರಿಸ್ (D) ಮಸೂರ
ಸರಿಯಾದ ಉತ್ತರ: (B) ರೆಟಿನಾ
11. ಅಯೋಡಿನ್ ಕೊರತೆಯಿಂದ ಬರುವ ರೋಗ ಯಾವುದು?
(A) ಗಳಗಂಡ (B) ಇರುಳು ಕುರುಡುತನ (C) ಸ್ಕರ್ವಿ (D) ರಿಕೆಟ್ಸ್
ಸರಿಯಾದ ಉತ್ತರ: (A) ಗಳಗಂಡ (Goitre)
12. ಲೋಹಗಳ ಮೇಲೆ ವಿದ್ಯುತ್ ಪ್ರವಾಹದ ಸಹಾಯದಿಂದ ಲೇಪನ ಮಾಡುವುದನ್ನು ಏನೆನ್ನುತ್ತಾರೆ?
(A) ವಿದ್ಯುತ್ ವಿಭಜನೆ (B) ವಿದ್ಯುತ್ ಲೇಪನ (C) ಶುದ್ಧೀಕರಣ (D) ಮಿಶ್ರಲೋಹ
ಸರಿಯಾದ ಉತ್ತರ: (B) ವಿದ್ಯುತ್ ಲೇಪನ
13. ಮಣ್ಣನ್ನು ಹದಮಾಡುವ ಮತ್ತು ತಿರುವಿ ಹಾಕುವ ಪ್ರಕ್ರಿಯೆ?
(A) ಬಿತ್ತನೆ (B) ಉಳುಮೆ (C) ನೀರಾವರಿ (D) ಕಳೆ ಕೀಳುವಿಕೆ
ಸರಿಯಾದ ಉತ್ತರ: (B) ಉಳುಮೆ
14. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಪ್ರಮುಖ ಅನಿಲ?
(A) ಆಮ್ಲಜನಕ (B) ಕಾರ್ಬನ್ ಡೈ ಆಕ್ಸೈಡ್ (C) ಸಾರಜನಕ (D) ಓಝೋನ್
ಸರಿಯಾದ ಉತ್ತರ: (B) ಕಾರ್ಬನ್ ಡೈ ಆಕ್ಸೈಡ್
15. ಪತನ ಕೋನವು ಯಾವಾಗಲೂ ಪರಾವರ್ತನ ಕೋನಕ್ಕೆ ______ ಆಗಿರುತ್ತದೆ.
(A) ಸಮನಾಗಿರುತ್ತದೆ (B) ಹೆಚ್ಚಾಗಿರುತ್ತದೆ (C) ಕಡಿಮೆಯಾಗಿರುತ್ತದೆ (D) ವಿರುದ್ಧವಾಗಿರುತ್ತದೆ
ಸರಿಯಾದ ಉತ್ತರ: (A) ಸಮನಾಗಿರುತ್ತದೆ
Join WhatsApp Channel Join Now
Telegram Group Join Now